Dharwad

ಧಾರವಾಡದ ಹೆಬ್ಬಳ್ಳಿ ಗ್ರಾಮದ ಎರಡು ಸರ್ಕಾರಿ ಶಾಲೆಗಳಲ್ಲಿ ಶಿಕ್ಷರ ಕೊರತೆ ಪೋಷಕರಲ್ಲಿ ಆತಂಕ…

Share

ಅದೂ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಐತಿಹಾಸಿಕ ಹೆಸರು ಹೊಂದಿರುವ ಗ್ರಾಮ, 101ಬಾವಿ ಹಾಗೂ 101 ದೇವಸ್ಥಾನಗಳು ಈ ಗ್ರಾಮದಲ್ಲಿವೆ. ಇದರ ಜತೆಗೆ ಈಗ ಆ ಗ್ರಾಮದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ತುಂಬಿ ತೂಳ್ಳುಕೊವಷ್ಟು ಸಂಖ್ಯೆ ಇದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರೇ ಇಲ್ಲಾ. ಇದಕ್ಕಾಗಿ ಆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಸರ್ಕಾರಿ ಕಚೇರಿಗೆ ಅಲೇದೂ ಅಲೇದೂ ಸುಸ್ತಾಗಿ ಹೋಗಿದ್ದಾರೆ. ಇದ ಶಿಕ್ಷಕರ ಗೋಳೂ ಅಧಿಕಾರಿಗಳೆಗೆ ಕೇಳುತ್ತಿಲ್ಲ, ಇನ್ನೊಂದು ಕಡೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಇದೂ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಇದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಒಂದು ಕಡೆ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ತುಂಬಿ ತುಳುಕುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ…ಮತ್ತೊಂದು ಕಡೆ ಮಕ್ಕಳ ಶೈಕ್ಷಿಣಿಕ ಭವಿಷ್ಯಕ್ಕೆ ಪೆಟ್ಟು ಬಿಳಬಾರದೆಂಬ ನಿಟ್ಟಿನಲ್ಲಿ ಮಕ್ಕಳ ಹೆಚ್ಚಿನ ಸಂಖ್ಯೆ ನಡುವೆಯೂ ಪಾಠ ಮಾಡುತ್ತಿರುವ ಶಿಕ್ಷಕರು….ಮಗದೊಂದು ಕಡೆ ಶಾಲೆಗೆ ಅತಿಥಿ ಶಿಕ್ಷಕರನ್ನು ನೀಡಲು ಮನವಿ ಪತ್ರವನ್ನು ಬಿಇಓ ಕಚೇರಿ ಕೊಟ್ಟು ಕೊಟ್ಟು ಸುಸ್ತಾಗಿರುವ ಎರಡು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಸದಸ್ಯರು. ಎಸ್ ಈಗ ನಾವು ನಿಮ್ಮಗೆ ಹೇಳಲು ಹೊರಟ್ಟಿರುವ ಗ್ರಾಮದ ಸರ್ಕಾರಿ ಶಾಲೆಯ ಗೋಳ ಹೇಳು ಮುಂಚೆ ಗ್ರಾಮ ಇತಿಹಾಸ ಎರಡಲೈನಲ್ಲಿ ಹೇಳ್ತೇವೆ. ಈ ಗ್ರಾಮ ಧಾರವಾಡ ಜಿಲ್ಲೆಯಲ್ಲಿಯೇ ತನ್ನದೆಯಾದ ಇತಿಹಾಸ ಹೊಂದಿದೆ, ಗ್ರಾಮದಲ್ಲಿ 101ಬಾವಿ ಹಾಗೂ 101 ದೇವಸ್ಥಾನ ಇರುವ ಖ್ಯಾತಿ ಹೊಂದಿದೆ. ಆದರೆ ಈಗ ಇಂತಹ ಇತಿಹಾಸ ಹೊಂದಿರುವ ಹೆಬ್ಬಳ್ಳಿ ಗ್ರಾಮದಲ್ಲಿ ಎರಡು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ದೊಡ್ಡ ಮಟ್ಟಿಗೆ ಎದುರಿಸುತ್ತಿವೆ. ಗ್ರಾಮದಲ್ಲಿ ಒಂದು ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ಇದೆ. ಇನ್ನೊಂದು ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಇದ್ದು,ಈಗ ನಾವು ಮೊದಲು ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯ ಕುರಿತು ನೋಡುವುದಾರೆ. ಈ ಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 528, lkg ಯಿಂದ 8ನೇಯ ತರಗತಿಯವರೆಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. 12 ಶಾಲಾ ಕೊಠಡಿಯಲ್ಲಿ, 14 ಶಿಕ್ಷಕರು ಸೇರಿ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಇನ್ನೂ ಹೆಡ್ ಮಾಸ್ಟರ್ ಹಾಗೂ ಪಿ ಟೀಚರ್ಸ್ ತರಗತಿ ತೆಗೆದುಕೊಳ್ಳುವುದಿಲ್ಲ. ಇನ್ನೂ ಉಳಿದ 12 ಜನ ಶಿಕ್ಷಕರು ಪ್ರಸ್ತುತ 528 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದು, ಇದರಿಂದಾಗಿ ಮಕ್ಕಳ ಶೈಕ್ಷಿಣಿಕ ಭವಿಷ್ಯದ ಮೇಲೆ ಬಹುದೊಡ್ಡ ಪೆಟ್ಟು ಬಿಳುತ್ತಿದೆ. ಒಂದು ಕ್ಲಾಸ್ ರೂಮನಲ್ಲಿ ಎರಡು ತರಗತಿ ವಿದ್ಯಾರ್ಥಿಗಳನ್ನು ಕೂರಿಸಿ ಶಿಕ್ಷಕರು ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದರ ಬಗ್ಗೆ ಧಾರವಾಡ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿ ರಾಮಕೃಷ್ಣ ಸದಲಗಿ ಅವರಿಗೆ ಮನವಿ ಪತ್ರ ಜತೆಗೆ ಖುದ್ದಾಗಿ ಕೇಳುಕೊಂಡರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೆಣ್ಣು ಮಕ್ಕಳ ಶಾಲೆಗೆ 5 ಜನ ಅತಥಿ ಶಿಕ್ಷಕರನ್ನು ಕೂಡಲೇ ನೀಡದೇ ಹೋದರೆ ನಾವು ಮಕ್ಕಳ, ಪೋಷಕರು ಸೇರಿ ಎಸ್‌ಡಿಎಂಸಿ ಸದಸ್ಯರೆಲ್ಲರು ಹೋರಾಟಕ್ಕೆ ಇಳಿವುದೊಂದೆ ದಾರಿ ನಮ್ಮಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದೂ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯ ಎಸ್‌ಡಿಎಂಸಿ ಸದಸ್ಯರ ಗೋಳು ಇದಾದ್ರೇ, ಇನ್ನೂ ಇದೇ ಗ್ರಾಮದಲ್ಲಿನ ಶತಮಾನೋತ್ಸವ ಆಚರಣೆ ಮಾಡಿರುವ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಗೋಳ ಕೂಡಾ ಇದೆಯಾಗಿದೆ. ಗಂಡು ಮಕ್ಕಳ ಶಾಲೆಯಲ್ಲಿ ಎಲ್‌ಕೆಜಿ ಯಿಂದ 8ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ 446 ಇದ್ದು, ಈ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರ ಪ್ರಸ್ತುತ ಸಂಖ್ಯೆ 11 ಜನರಿದ್ದು, ಇದರಲ್ಲಿ ಒಬ್ಬರು ಲಾಂಗ್ ಲೀವ್‌ನಲ್ಲಿದ್ದಾರೆ, ಇನ್ನೊಬ್ಬರು ಡೆಟ್ಫಟೇಷನ್ ಮೇಲಿದ್ದಾರೆ. ಆದರೆ ಈಗ ಶಾಲೆಯಲ್ಲಿ ತರಗತಿ ತೆಗೆದುಕೊಳ್ಳವರು ಕೆವಲ 8 ಜನ ಶಿಕ್ಷಕರು, ವಿದ್ಯಾರ್ಥಿಗಳ ದೈಹಿಕ ಶಿಕ್ಷಕರು ಕೂಡಾ ಈ ಶಾಲೆಯಲ್ಲಿ ಇಲ್ಲ. ಈ ಎಲ್ಲ ಸಮಸ್ಯೆಗಳ ನಡುವೆಯೇ ಇದ್ದ ಶಿಕ್ಷಕರು ಎರಡು ತರಗತಿಗಳನ್ನು ಒಂದೇ ಕ್ಲಸ್‌ನಲ್ಲೆ ಕುರಿಸಿ ಪಾಠ ಮಾಡು ಸ್ಥಿತಿ ಗ್ರಾಮದ ಎರಡು ಸರ್ಕಾರಿ ಶಾಲೆಗಳಿಗೆ ಬಂದಿದೆ‌. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಧಾರವಾಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಬಿಇಓ ಚಪಡಿ ಕಲ್ಲು ಎಳೆಯುತ್ತಿದ್ದಾರೆ. ಶಿಕ್ಷಕರ ಕೊರತೆ ಸಮಸ್ಯೆ ನಿಗಿಸಿ ಎಂದು ಎಸ್‌ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಗೆ ಅಲೇದೂ ಅಲೇದೂ ಸುಸ್ತಾಗಿ ಅಧಿಕಾರಿಯ ನಿರ್ಲಕ್ಷ್ಯ ಮಕ್ಕಳ ಪೋಷಕರು ಸೇರಿ ಸದಸ್ಯರು ಹಿಡಿ ಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಧಾರವಾಡ ಹೆಬ್ಬಳ್ಳಿ ಗ್ರಾಮದ ಎರಡು ಸರ್ಕಾರಿ ಶಾಲೆಗಳಲ್ಲಿ ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೊಂದಿರುವುದು ಒಂದು ಕಡೆ ಹೆಮ್ಮೆಯಾದ್ರೇ, ಅದೇ ಶಾಲೆಗೆ ಶಿಕ್ಷಕರ ಕೊರತೆ ಎದುರಿಸುತ್ತಿರುವು ಈಗ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಮಕ್ಕಳ ಪೋಷಕರ ಆತಂಕಕ್ಕೂ ಕೂಡಾ ಕಾರಣವಾಗಿದೆ. ಒಂದು ಕಡೆ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಸರ್ಕಾರ ಹಾಗೂ ಅಧಿಕಾರಿಗಳು, ಇಲ್ಲಿ ಕಲೆಯಲು ಮಕ್ಕಳು ಬರುತ್ತಿದ್ದರೆ ಅವರಿಗೆ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದೆ. ಕ್ಷೇತ್ರ ಶಿಕ್ಷಣ ಅಧಿಕಾರಿ ಹಾಗೂ ಜಿಲ್ಲಾಡಳಿತ ಈಗ ಏನೂ ಕ್ರಮ ಕೈಗೋಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಮಂಜುನಾಥ ಡಿ ಇನ್ ನ್ಯೂಸ್ ಧಾರವಾಡ.

Tags:

error: Content is protected !!