ಜಲ ಸಂಪನ್ಮೂಲ ಸಚಿವರಾದ ರಾಮಲಿಂಗಾ ರೆಡ್ಡಿ ಸಚಿವರಾದ ಬಳಿಕ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಮೊದಲು ಆಲಮಟ್ಟಿ ಜಲಾಶಯದ ಬಳಿ ಜನರು, ರೈತರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು. ಬಳಿಕ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಗೇಟ್ ಮುಂಭಾಗದಲ್ಲಿ ವೀಕ್ಷಣೆ ನಡೆಸಿದರು. ಇದೇ ವೇಳೆ ಗೇಟ್ ಮೂಲಕ ನೀರು ಬಿಡುಗಡೆ ಆಗೋದನ್ನು ಸಚಿವರಿಗೆ ಅಧಿಕಾರಿಗಳು ತೋರಿಸಿದರು. ಇನ್ನೂ ಡ್ಯಾಂ ನಲ್ಲಿ ನೀರು ಸಂಗ್ರಹ, ಒಳ ಹಾಗೂ ಹೊರ ಹರಿವಿನ ಕುರಿತು ಕೆಬಿಜೆಎನ್ ಎಲ್ ಅಧಿಕಾರಿ ಡಿ. ಬಸವರಾಜ್ ಸಚಿವರಿಗೆ ಮಾಹಿತಿ ನೀಡಿದರು. ಬಳಿಕ ಆಲಮಟ್ಟಿ ಜಲಾಶಯದ ಬಳಿ ಇರುವ ವಾಟರ್ ಪಾರ್ಕ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮಾಜಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಅಪ್ಪಾಜಿ ನಾಡಗೌಡ, ಜೆ ಟಿ ಪಾಟೀಲ್, ಉಮೇಶ್ ಮೇಟಿ ಸಾಥ್ ನೀಡಿದರು.


ಇದೇ ವೇಳೆ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಇಂದು ಆಲಮಟ್ಟಿ, ನಾರಾಯಣಪುರ, ಕಾಡಾ, ಎಡದಂಡೆ ನಾಲೆ ವೀಕ್ಷಣೆ ಮಾಡಲಾಗುವದು. ಬಳಿಕ ಮುದ್ದೇಬಿಹಾಳದಲ್ಲಿ ಕೆಲ ಕಾರ್ಯಕ್ರಮ ಉದ್ಘಾಟನೆ ಮಾಡಿ ರಾತ್ರಿ ಬೆಂಗಳೂರಿಗೆ ಹೋಗುತ್ತೇನೆ. ಇಲ್ಲಿನ ಸಮಸ್ಯೆಗಳು ಗೊತ್ತಿರುವಂತದ್ದೆ. ಒಂದು ಲ್ಯಾಂಡ್ ಅಕ್ವಿಜೇಷನ್ ಆಗಬೇಕು, ಅದಕ್ಕೆ ಪರಿಹಾರ ಕೊಡಬೇಕು. ಮುಖ್ಯವಾಗಿ ಅಪ್ಪರ್ ಕೃಷ್ಣ. ಅದನ್ನು ಈಗಾಗಲೇ ನಾನು, ಮುಖ್ಯ ಮಂತ್ರಿಗಳು, ಅವತ್ತು ತುಂಗಭದ್ರಾ ಡ್ಯಾಂನಲ್ಲಿ ಕೇಂದ್ರದ ಮಂತ್ರಿಗಳು ಬಂದಿದ್ದಂತಹ ಸಂದರ್ಭದಲ್ಲಿ, ಚಂದ್ರ ಬಾಬು ನಾಯ್ಡು ಅವರು ಬಂದಿದ್ದರು, ರೇವಂತ್ ರೆಡ್ಡಿಯವರು ಕೂಡ ಬಂದಿದ್ದರು. ಈಗಾಗಲೇ ನೋಟಿಫಿಕೇಶನ್ ಆಗಿ 13 ವರ್ಷ ಆಯ್ತು. 2050 ಕ್ಕೆ ಮುಗಿದು ಹೋಗುತ್ತೆ. ಆದಷ್ಟು ಬೇಗ ಅದು ನೋಟಿಫಿಕೇಶನ್ ಆಗಬೇಕು, ಡ್ಯಾಂ ಎತ್ತರ ಆಗಬೇಕು, ಗೇಟ್ಸ್ ಮತ್ತೆ 130 ಟಿಎಂಸಿ ನಮಗೆ ಏನು ಅಲೋಕೇಷನ್ ಆಗಿದೆ, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಕೋರ್ಟು ಕಚೇರಿ ಎಂದರೆ ಲೇಟ್ ಆಗುತ್ತೆ.

ಸ್ವಲ್ಪ ಕೂತು ಪರಿಹಾರ ಮಾಡಿಕೊಳ್ಳಬಹುದು ಅಥವಾ ಕೋರ್ಟ್ ಬೇಗ ತೀರ್ಪು ಕೊಟ್ಟು ಬಿಟ್ಟರೆ ಏನು ಸಮಸ್ಯೆ ಇರಲ್ಲ ಎಂದರು. ಇನ್ನೂ ಈ ವಿಚಾರವಾಗಿ ದೆಹಲಿಗೆ ಹೋಗಿ, ನಾನು ಮುಖ್ಯಮಂತ್ರಿಗಳು, ಕೇಂದ್ರದ ಜಲಶಕ್ತಿ ಮಂತ್ರಿಗಳಾದ ಪಾಟೀಲ್ ಅವರ ಜೊತೆ ಚರ್ಚೆ ಮಾಡಿ ಚರ್ಚೆ ಆದ ಮೇಲೆ, ತುಂಗಭದ್ರಾ ಡ್ಯಾಂನಲ್ಲೂ ಕೂಡ ಒಂದು ಬಾರಿ ಚರ್ಚೆಯಾಗಿದೆ. ಮೂರು ಜನ ಮುಖ್ಯಮಂತ್ರಿಗಳು, ಮತ್ತೆ ಇನ್ನೊಂದು ಎರಡು-ಮೂರು ಸಿಟ್ಟಿಂಗ್‌ನಲ್ಲಿ ಎಲ್ಲವೂ ಕ್ಲಿಯರ್ ಆಗುತ್ತೆ ಎಂದರು. ಬಳಿಕ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದಲ್ಲಿ ನೀರು ಹರಿಯುವದನ್ನು ವೀಕ್ಷಣೆ ಮಾಡಿ ವಾಟರ್ ಪಾರ್ಕ ವೀಕ್ಷಿಸಿದ ಬಳಿಕ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿ ಇಲ್ಲಿ ವಾಟರ್ ಪಾರ್ಕ ತುಂಬಾ ಚೆನ್ನಾಗಿ ಮಾಡಿದ್ದಾರೆ, ರಾಕ್ ಗಾರ್ಡನ್, ತ್ರೀಡಿ ಹೀಗೆ 17 ವಿವಿಧ ಸ್ಥಳ ನೋಡುವದನ್ನು ಚೆನ್ನಾಗಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿ ಇನ್ನೂ ಏನೇನು ಬೇಡಿಕೆ ಇದೆ ಅದನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂದರು. ಇನ್ನೂ ಇದೇ ವೇಳೆ ಮಾತನಾಡುತ್ತಾ ಕುಡಿಯುವ ನೀರಿಗೆ ಸದ್ಯ ಯಾವುದೇ ಸಮಸ್ಯೆ ಇಲ್ಲ, ಮುಂಗಾರು ಬೆಳೆಗೆ 67 ಟಿಎಂಸಿ ನೀರು ಬೇಕು, ಮಹಾರಾಷ್ಟ್ರ ದಲ್ಲಿ ಮಳೆ ಬಂದು ಡ್ಯಾಂ ತುಂಬಿದರೆ ಕಾಲುವೆಯ ಮೂಲಕ ನೀರು ಹರಿಸುತ್ತೇವೆ ಎಂದರು…
ಬೈಟ್ : ರಾಮಲಿಂಗಾ ರೆಡ್ಡಿ, ಜಲ ಸಂಪನ್ಮೂಲ ಸಚಿವರು…
