ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 100 ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಗೋಮೌಂಸ ಸಾಗಾಟ ಮಾಡುತಿದ್ದ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಳೆದ ದಿನ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕೆಲಗೇರಿ ಮಾರ್ಗವಾಗಿ ಗೋವಿನ ಮೌಂಸ್ ತಮಬಿಕೊಂಡು ವಾಹನ ತೆರಳುತ್ತಿರುವ ಖಚಿತ ಮಾಹಿತಿ ವಾಹನನ್ನು ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಕಾರ್ಯಕರ್ತರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸುಮಾರು 100 ಕ್ಕೂ ಹೆಚ್ಚು ಗೋವುಗಳ ಅಮಾನವೀಯವಾಗಿ ಹತ್ಯೆ ಮಾಡಿ ಅವುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಾಹನ ಪತ್ತೆ ಮಾಡಿದ್ದಾರೆ. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಪತ್ತೆ ಹಚ್ಚಿದ ಕಾರ್ಯಕರ್ತರು ಧಾರವಾಡ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗೋವಿನ ಮೌಂಸ ತುಂಬಿಕೊಂಡ ಬರುತ್ತಿದ್ದ ವಾಹನವು ಬೆಳಗಾವಿಯ ಆಟೋ ನಗರದ ಅಮೂಲ್ ಫ್ಯಾಕ್ಟರಿಯಲ್ಲಿ ಗೋವುಗಳ ಮೌಂಸ್ ತುಂಬಿಕೊಂಡು ಬರುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಪ್ರಾಥಮಿಕ ಮಾಹಿತಿಯಂತೆ, ಈ ಗೋಮಾಂಸವನ್ನು ಬೆಂಗಳೂರಿನ ನೀಲಸಂದ್ರಕ್ಕೆ ಕಳುಹಿಸಲಾಗುತ್ತಿತ್ತು, ಧಾರವಾಡ ರಾಷ್ಟ್ರೀಯ ಹೆದ್ದಾರಿಯ ಕೆಲಗೇರಿ ಸಮೀಪ ವಾಹನವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ತಡೆದುಪೊಲೀಸ್ ಧಿಕಾರಿಗಳನ್ನ ಸ್ಥಳಕ್ಕೆ ಕರೆಯಿಸಿ ವಾಹನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಇದರ ಮುಖ್ಯ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.
