Hukkeri

ಹುಕ್ಕೇರಿ : ಸಂಸ್ಥೆಯ ಲಾಭ ಪಡೆದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ – ಇಕ್ಬಾಲ್ ಪೀರಜಾದೆ

Share

ವಿದ್ಯಾಸಂಸ್ಥೆಯ ಲಾಭ ಪಡೆದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು ಎಂದು ಬೆಳಗಾವಿ ಜಿಲ್ಲಾ ಮುಸ್ಲಿಂ ಕಲ್ಯಾಣ ಹಾಗೂ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಪೀರಜಾದೆ ಹೇಳಿದರು.

ಹುಕ್ಕೇರಿ ನಗರದ ಟೀಪ್ಪು ಸುಲ್ತಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 26 – 27 ನೇ ಸಾಲಿನ ಪಿ ಯು ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಪ್ರಾರಂಭೊತ್ಸವ ಕಾರ್ಯಕ್ರಮ ಜರುಗಿತು.
ಬೆಳಗಾವಿಯ ಲೇಕ್ಕ ಪರಿಶೋಧಕ ನೋವೆಲ್ ಗೋಳೆ ಮಾತನಾಡಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಗುರಿ ಇಟ್ಟು ಐದು ವರ್ಷ ಕಠಿಣ ಅಭ್ಯಾಸದಿಂದ ಗುರಿ ತಲುಪಿ ಸಂಸ್ಥೆಗೆ ಮತ್ತು ಪಾಲಕರಿಗೆ ಆದರ್ಶವಾಗಬೇಕು ಎಂದರು

ನಂತರ ಗಣ್ಯರು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಿದರು.
ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಪೀರಜಾದೆ ಮಾತನಾಡಿ ನಾವು ಹೇಳಿದಂತೆ ಈ ವರ್ಷ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರ೮ಸಲಾಗಿದೆ ಕಾರಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶ್ರಮ ವಹಿಸಿ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು ಎಂದರು

ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಶಾಹೀದರಜಾ ಪೀರಜಾದೆ,ಪ್ರಾಚಾರ್ಯ ಬಿ ಎಸ್ ಅರಭಾಂವಿ, ನಶಿಂ ಮೌಲಾನಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕಲಂದರ ಮೋಕಾಶಿ, ಎಂ ಆರ್ ಮೋಕಾಶಿ, ಡಿ ಆರ್ ಖಾಜಿ, ಮುನಾಫ್ ಪೀರಜಾದೆ ,ಹಸನ ಮುಜಾವರ ಹಾಗೂ ಸಂಸ್ಥೆಯ ಪ್ರಾಚಾರ್ಯ,ಉಪನ್ಯಾಸಕ ಮತ್ತು ಮುಖ್ಯೋಪಾದ್ಯಯರಾದ ಆರ್ ಎ ಇಂಗೋಲಿ, ಜಿ ಎಸ್ ಕಾಡಗೌಡಾ, ಎಂ ಬಿ ಮಠದ, ಯಾಶೀನ ನದಾಫ್, ಎಚ್ ಎಂ ಬಾಗವಾನ, ಬಿ ಎ ಪಾಟೀಲ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!