ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸ ಮಾಡುವುದರೊಂದಿಗೆ ತಮ್ಮಲ್ಲಿ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ನಿಮಗೆ ಶಿಕ್ಷಣ ನೀಡಿದ ಗುರುಗಳು ಹಾಗೂ ಜನ್ಮ ನೀಡಿದ ತಂದೆ-ತಾಯಿ ಇವರ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಅಂದಾಗ ಮಾತ್ರ ನಿಮ್ಮ ಜೀವನ ಸಾರ್ಥಕಗೊಳ್ಳಲಿದೆ ಎಂದು ಬೆಂಗಳೂರಿನ ಟೆಕ್ಸಸ್ ಇನ್ಸ್ಟ್ರುಮೆಂಟ್ ಕಂಪನಿಯ ಅಧಿಕಾರಿಗಳಾದ ಭರತ್ ಕೆ. ಎನ್. ಇವರು ಉಗಾರದಲ್ಲಿ ಹೇಳಿದರು.


ಶನಿವಾರದಂದು ಟೆಕ್ಸಸ್ ಕಂಪನಿ ವತಿಯಿಂದ ಉಗಾರದ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಯ 700 ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸ್ಕೂಲ್ ಬ್ಯಾಗ್, ಬುಕ್ಸ್, ಪೌಚ್, ಪೆನ್ಸಿಲ್, ರಬ್ಬರ್, ಎinternalರೇಸರ್, ಎರಡು ಸ್ಕೇಲ್ ಹಾಗೂ ಶಾರ್ಪನರ್ ಇವುಗಳನ್ನು ವಿತರಿಸಿ, ವಿದ್ಯಾರ್ಥಿಗಳಿಗೆ ಕೆಲ ಹಿತನುಡಿಗಳನ್ನು ಭರತ್ ಕೆ. ಎನ್. ಅವರು ಹೇಳಿದರು.
ಟೆಕ್ಸಸ್ ಕಂಪನಿಯ ಪ್ರತಿನಿಧಿಗಳಾದ ಸುಜಾತ ಅಶೋಕ್ ಹುಲ್ಲೋಳಿ ಹಾಗೂ ವಿದ್ಯಾಶ್ರೀ ಆರ್. ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಬ್ಯಾಗ್ ಹಾಗೂ ಬುಕ್ಸ್‌ಗಳನ್ನು ವಿತರಿಸಿದರು.

ಉಗಾರದ ಸರ್ಕಾರಿ ಮರಾಠಿ ಶಾಲೆಯ ಮುಖ್ಯಾಧ್ಯಾಪಕರಾದ ಎಸ್. ಬಿ. ತೋಡಕರ್, ಎಸ್‌ಡಿಎಂಸಿ ಅಧ್ಯಕ್ಷರಾದ ನೀತಾ ಕುಂಬಾರ್, ಎ. ಎಂ. ಮಗದುಮ್, ಬಿ. ಎನ್. ಆಗಾವೆ ಹಾಗೂ ಶಾಲೆಯ ಇತರ ಶಿಕ್ಷಕರು ಪಾಲ್ಗೊಂಡಿದ್ದರು. ಇಲ್ಲಿಗೆ 136 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ಫರೀದಖಾನವಾಡಿ ಗ್ರಾಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾದ ಮಹೇಶ್ ಹುಲ್ಲೋಳಿ ಇವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಈ ವೇಳೆ ಉಗಾರ ಪುರಸಭೆ ಸದಸ್ಯರಾದ ರಾಜು ಪಾಟೀಲ್, ವೀರಭದ್ರ ಕಟಗೇರಿ, ಪ್ರಕಾಶ್ ಅಂಬಲೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾದ ಮಹಾಲಿಂಗ ಕಟಗೇರಿ ಉಪಸ್ಥಿತರಿದ್ದರು.
ವರದಿ: ಸುಕುಮಾರ್ ಬನ್ನೂರೆ, ಇನ್ ನ್ಯೂಸ್ ಕಾಗವಾಡ
