Uncategorized

ಶೂ ಭಾಗ್ಯ ಯೋಜನೆಯಲ್ಲಿ ಭ್ರಷ್ಟಾಚಾರ: ದಲಿತ ಚರ್ಮಕುಶಲಕರ್ಮಿಗಳಿಗೆ ಅನ್ಯಾಯ; ಅನಿಲ್ ಸೌದಾಗರ

Share

ಪ್ರಸಕ್ತ ಸಾಲಿನ ಶೂ ಭಾಗ್ಯ ಯೋಜನೆಯಲ್ಲಿ ದೊಡ್ಡ ಗೋಲ್ ನಾಲ್ ಮಾಡಿ ರಾಜ್ಯದ ಎಲ್ಲ ಶಾಲೆಗಳ ಬಡ ಮಕ್ಕಳ ಜೊತೆಗೆ ಚೆಲ್ಲಾಟವಾಡಿ ಸರಕಾರ ದಲಿತ ಚರ್ಮಕುಶಲಕರ್ಮಿಗಳಿಗೆ ಅನ್ಯಾಯ ಮಾಡಿದೆ ಎಂದು ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಅನಿಲ್ ಸೌದಾಗರ ಆರೋಪಿಸಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚರ್ಮಕುಶಲಕರ್ಮಿಗಳಿಗೆ ರಾಜ್ಯ ಸರಕಾರ ಅನ್ಯಾಯ ಮಾಡಿ ದೆಹಲಿ ಮೂಲದವರಿಗೆ ಶೂ ಭಾಗ್ಯ ಯೋಜನೆ ನೀಡಿ ಕರ್ನಾಟಕದವರಿಗೆ ಅನ್ಯಾಯ ಮಾಡಿದೆ ಎಂದರು.
ರಾಜ್ಯದ 36.56 ಲಕ್ಷ ವಿದ್ಯಾರ್ಥಿಗಳ ಶೂ ಭಾಗ್ಯದ ವೆಚ್ಚ 104 ಕೋಟಿ ಬೇರೆ ರಾಜ್ಯಕ್ಕೆ ಮತ್ತು ಅನ್ಯ ಜನಾಂಗಗಕ್ಕೆ ಕೊಟ್ಟಿದ್ದು ನಮ್ಮ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ. ಕೂಡಲೇ ಸರಕಾರ ಕೂಡಲೇ ಈ ಟೆಂಡರ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಪ್ರೇಮಾ ಬಂಢಾರಿ ಮಾತನಾಡಿ, ದಲಿತರ ಪರವಾಗಿರುವ ಸರಕಾರ ಎಂದು ಹೇಳಿಕೊಳ್ಳುವ ಸರಕಾರ ಶೂ ಭಾಗ್ಯ ಹೆಸರಿನಲ್ಲಿ ದಲಿತರಿಗೆ ಅನ್ಯಾಯ ಮಾಡಿದೆ. ಕೂಡಲೇ ಸರಕಾರ ದೆಹಲಿಯವರಿಗೆ ನೀಡಿರುವ ಶೂ ಭಾಗ್ಯ ಟೆಂಡರ್ ರದ್ದು ಮಾಡಿ ನಮ್ಮ ಕರ್ನಾಟಕದವರಿಗೆ ನೀಡಬೇಕು ಎಂದರು.

ಅನಂತಕುಮಾರ ಬ್ಯಾಕೂಡ್ ಮಾತನಾಡಿ, ಸರಕಾರ ಶೂ ಭಾಗ್ಯದಲ್ಲಿ ಬೇರೆ ರಾಜ್ಯಕ್ಕೆ ಟೆಂಡರ್ ನೀಡಿರುವುದು ಸರಿಯಲ್ಲ. ಕೂಡಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ನಿಯೋಗ ತೆಗೆದುಕೊಂಡು‌ ಹೋಗಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.

Tags:

error: Content is protected !!