2023ರಲ್ಲಿ ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕುಲಕರ್ಣಿಯವರಿಗೆ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ, ಆದರೆ ಈ ಶಿಕ್ಷೆ ಪ್ರಮಾಣಕ್ಕೆ ಕೋರ್ಟ್ ತಡೆ ನೀಡದಿರುವ ಹಿನ್ನಲೆಯಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಬೈ ಎಲೆಕ್ಷಣ ಫಿಕ್ಸ್ ಆಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈಗ ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿಯೇ ನಡೆದಿದ್ದು, ಕೈ ಹಾಗೂ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಲೆಕ್ಕಾರದಲ್ಲಿ ಬ್ಯೂಸಿಯಾಗಿದ್ದಾರೆ.

2023ರಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರನ್ನು ಸೋಲಿಸಿ ವಿನಯ ಕುಲಕರ್ಣಿ ಅವರು ಶಾಸಕರಾಗಿದ್ದರು, ಈಗ ಮತ್ತೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನೇರಾನೇರ ಪೈಟ್ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ಬಿಜೆಪಿ ನಾಯಕರಿಂದ ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಒಂದಡೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ರೆ.ಇನ್ನೊಂದೆಡೆ ಹೊಸ ಮುಖಗಳಾದ ಸವೀತಾ ಅಮರಶೆಟ್ಟಿ, ಮಂಜುನಾಥ ಮಕ್ಕಳಗೇರಿಯವರಿಂದಲ್ಲೂ ಬಿಜೆಪಿ ಟಿಕೆಟ್ಗಾಗಿ ಫೈಪೋಟಿ ನಡೆಯುತ್ತಿದೆ. ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ಕೈ ಕಾರ್ಯಕರ್ತರನ್ನು ಸೆಳೆಯುತ್ತಿರುವ ಬಿಜೆಪಿ ನಾಯಕರು ಒಂದು ಕಡೆಯಾದರೆ, ಕಾಂಗ್ರೆಸ್ನಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಟಿಕೆಟ್ ರೇಸನಲ್ಲಿ ಇದ್ದಾರೆ. ಕುಲಕರ್ಣಿ ಪತ್ನಿ ಶಿವಲೀಲಾ ಅವರು 2023ರ ಚುನಾವಣೆಯಲ್ಲಿ ಕುಲಕರ್ಣಿಗೆ ಧಾರವಾಡ ಜಿಲ್ಲೆಯ ಪ್ರವೇಶ ನಿರ್ಭಂದ ಮಧ್ಯೆಯು ಚುನಾವಣೆಯಲ್ಲಿ ಪತಿಯನ್ನು ಗೆಲ್ಲಿಸಿದ್ದಾರೆ.ಇನ್ನೂ ಬಿಜೆಪಿಯಿಂದ 2023 ಚುನಾವಣೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸೇರಿ ಕುಲಕರ್ಣಿ ಬೆಂಬಲಿಸಿದ ತವನಪ್ಪ ಅಷ್ಟಗಿ ಅವರು ಕೂಡ ಕೈ ಟಿಕೆಟ್ ರೇಸನಲ್ಲಿದ್ದಾರೆ. ವಿನಯ ಕುಲಕರ್ಣಿ ಪುತ್ರಿಯು ಕೂಡಾ ಟಿಕೆಟ್ ರೇಸನಲ್ಲಿರುವ ಚರ್ಚೆ ಕೂಡ ನಡೆಯುತ್ತಿದೆ. ಸದ್ಯ ಗ್ರಾಮೀಣ ಕ್ಷೇತ್ರದ ಬೈ ಎಲೆಕ್ಷನ್ ಹೈಕೋರ್ಟ ನಿರ್ಧಾರ ಮೇಲೆ ತೀರ್ಮಾಣವಾಗಲಿದೆ.
