Belagavi

ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯ ವಿಜೇತರಿಗೆ ಬೆಳಗಾವಿಯ ಮರಾಠಾ ಬ್ಯಾಂಕ್‌ನಿಂದ ಅದ್ಧೂರಿ ಸತ್ಕಾರ

Share

ಭೂತಾನ್‌ನಲ್ಲಿ ನಡೆದ ದಕ್ಷಿಣ ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ಹೆಮ್ಮೆಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಸಿದ್ಧ ಮರಾಠಾ ಕೋ-ಆಪ್ ಬ್ಯಾಂಕ್ ವತಿಯಿಂದ ವಿಜೇತ ಸಾಧಕರನ್ನು ಗೌರವಿಸಿ, ಸತ್ಕರಿಸಲಾಗಿದೆ.

ಭೂತಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭರ್ಜರಿ ಸಾಧನೆಗೈದು ಚಿನ್ನದ ಪದಕ ಗೆದ್ದ ಪ್ರತಾಪ್ ಕಾಲಕುಂದ್ರಿಕರ್, ಬೆಳ್ಳಿ ಪದಕ ವಿಜೇತ ಪ್ರಶಾಂತ್ ಖನ್ನೂಕರ ಮತ್ತು ಕಂಚಿನ ಪದಕ ಪಡೆದ ಕೇತಕಿ ಪಾಟೀಲ್ ಅವರಿಗೆ ಬೆಳಗಾವಿಯ ಮರಾಠಾ ಕೋ-ಆಪ್ ಬ್ಯಾಂಕ್ ವತಿಯಿಂದ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಬ್ಯಾಂಕಿನ ಚೇರ್ಮನ್ ಬಾಳಾರಾಮ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಜನರಲ್ ಮ್ಯಾನೇಜರ್ ಸಂತೋಷ್ ಧಾಮಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ವೈಸ್ ಚೇರ್ಮನ್ ಶೇಖರ್ ಹಂಡೆ ಅವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ದಿಗಂಬರ ಪವಾರ್, ರೇಣು ಕಿಲ್ಲೇಕರ್, ದೀಪಾಲಿ ದಳವಿ ಸೇರಿದಂತೆ ಹಲವು ಗಣ್ಯರು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದು ವಿಜೇತರಿಗೆ ಶುಭ ಹಾರೈಸಿದರು.

Tags:

error: Content is protected !!