Uncategorized

ಧಾರವಾಡದಲ್ಲಿ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ…AIUTUC ಸಂಘಟನೆ ನೇತೃತ್ವದಲ್ಲಿ ಡಿಸಿ ಕಚೇರಿ ಮುಂಭಾಗದಲ್ಲಿ ಆಕ್ರೋಶ

Share

ಕಟ್ಟಡ ಕಾರ್ಮಿಕರ ಬಾಕಿ ಸ್ಕಾಲರ್ಶಿಪ್ ಬಾಕಿ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‌

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ AIUTUC ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಕಟ್ಟಡ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಕಾರ್ಮಿಕರಿಗೆ ನೀಡುವ ಕಿಟ್ ಗಳು ನಮಗೆ ಬೇಡ, ಬಾಕಿ ಇರುವ 2 ವರ್ಷದ ಸ್ಕಾಲರ್ಶಿಪ್ ನೀಡಬೇಕು. ಹಳೆಯ ದರದಲ್ಲಿ ಬಾಕಿ ಹಣ ಬಿಡುಗಡೆ ಮಾಡಿ, ಎಲ್ಲ ಘೋಷಿತ ಹಕ್ಕುಗಳನ್ನ ಖಾತ್ರಿ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ, ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾರ್ಯಕರ್ತರು.

 

Tags:

error: Content is protected !!