ಬೆಳಗಾವಿಯ ಸ್ಫೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ನ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸಡಗರದಿಂದ ಜರುಗಿತು.

ಬೆಳಗಾವಿ ನಗರದ ಸ್ಫೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ನ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶಾಸಕ ಆಸೀಫ್ ಸೇಠ್ ಅವರು ಮಾತನಾಡಿದರು. ಈ ವೇಳೆ ಸಂಸ್ಥೆಯ ಪದಾಧಿಕಾರಿಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಸಂಸ್ಥೆಗೆ ಅಗತ್ಯವಿರುವ ಇನ್ವರ್ಟರ್ ಸೌಲಭ್ಯವನ್ನು ಆದಷ್ಟು ಬೇಗ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಭಾವನಾ ಹಾಗೂ ಸಂಸ್ಥೆಯ ಇತರೆ ಪದಾಧಿಕಾರಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯತ್ನವನ್ನು ಶ್ಲಾಘಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಡ್ಯಾನ್ಸ್ ಹಾಗೂ ಸಿಂಗಿಂಗ್ ಕಾಂಪಿಟೇಷನ್‌ಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಇಂತಹ ಸೃಜನಶೀಲ ಕಾರ್ಯಕ್ರಮಗಳಿಗೆ ತಮ್ಮ ಕಡೆಯಿಂದ ಎಲ್ಲ ರೀತಿಯ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ಸದಾ ಇರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಮುಖ ನ್ಯೂಸ್ ಆ್ಯಂಕರ್ ಭಾವನಾ ಅವರು, ಹೆಣ್ಣುಮಕ್ಕಳ ಪೋಷಣೆ ಮತ್ತು ಅವರ ಸ್ವಾವಲಂಬನೆ ಕುರಿತು ಅತ್ಯಂತ ಕಳಕಳಿಯ ಮಾತುಗಳನ್ನಾಡಿದರು. ಸಮಾಜದಲ್ಲಿ ಇತ್ತೀಚೆಗೆ ನಡೆದ ಟ್ವಿಶಾ ಶರ್ಮಾ ಹಾಗೂ ಸಿಯಾ ಅವರ ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ಹೆಣ್ಣುಮಕ್ಕಳು ತಮ್ಮ ಹೆತ್ತವರನ್ನು ಕನ್ವಿನ್ಸ್ ಮಾಡಲು ಸಾಧ್ಯವಾಗದೇ ಅಥವಾ ತಮ್ಮ ನೋವನ್ನು ಹಂಚಿಕೊಳ್ಳಲಾಗದೇ ಆತ್ಮಹತ್ಯೆ ಮತ್ತು ಕೊಲೆಯಂತಹ ದಾರಿಗಳಿಗೆ ಸಿಲುಕುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದರು. ನಾವು ಹೆಣ್ಣುಮಕ್ಕಳಿಗೆ ಉತ್ತಮ ಮಗಳಾಗಲು, ಸೊಸೆಯಾಗಲು, ತಾಯಿಯಾಗಲು ಸಂಸ್ಕಾರವನ್ನೇನೋ ಕಲಿಸುತ್ತಿದ್ದೇವೆ, ಆದರೆ ಅವರು ತಮಗೋಸ್ಕರ ಸ್ವತಂತ್ರವಾಗಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಡುತ್ತಿದ್ದೇವಾ? ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಕರೆ ನೀಡಿದರು., ‘ನೀವೇ ನಿಮ್ಮ ಕುಟುಂಬದ ಶಕ್ತಿ ಮತ್ತು ನಿಮ್ಮ ಹೆಣ್ಣುಮಕ್ಕಳ ಬೆನ್ನೆಲುಬು’. ಮದುವೆಯಾದ ಬಳಿಕ ನಿನ್ನ ಸಮಸ್ಯೆಯನ್ನು ತವರಿಗೆ ತರಬೇಡ ಎಂದು ಬೇಲಿ ಹಾಕಿ, ಮಕ್ಕಳ ಆಸೆಗಳನ್ನು ಹತ್ತಿಕ್ಕಿದಾಗ ನಾವು ನಮ್ಮ ಮಕ್ಕಳನ್ನು ನಾವೇ ಕೊಂದಂತಾಗುತ್ತದೆ ಎಂದು ಭಾವುಕರಾಗಿ ನುಡಿದ ಭಾವನಾ ಅವರು, ಹೆಣ್ಣುಮಕ್ಕಳಿಗೆ ಸದಾ ಬೆಂಬಲವಾಗಿ ನಿಲ್ಲುವಂತೆ ಪೋಷಕರಲ್ಲಿ ಮನವಿ ಮಾಡಿದರು.

ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಭಾವಿಕಟ್ಟಿ ಅವರು ಸವಿಸ್ತಾರವಾಗಿ ಮಾತನಾಡಿದರು. “ನಮ್ಮ ಸಂಸ್ಥೆಯು ಕೇವಲ ಆಟ ಮತ್ತು ಸಂಭ್ರಮಕ್ಕೆ ಸೀಮಿತವಾಗದೆ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಕುಂಕುಮಾರ್ಚನೆಯಂತಹ ಲಲಿತಾ ಪೂಜೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮತ್ತು ಅವರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ವಸ್ತು ಪ್ರದರ್ಶನಗಳನ್ನು ಸಹ ಏರ್ಪಡಿಸುತ್ತಿದ್ದೇವೆ. ಇದರೊಂದಿಗೆ ಅನಾಥ ಮಕ್ಕಳಿಗೆ ಸೈಕಲ್ ವಿತರಣೆ ಹಾಗೂ ಜೈಲಿನಲ್ಲಿರುವ ಮಹಿಳಾ ಕೈದಿಗಳ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ಒದಗಿಸುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದೇವೆ. ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ಆರ್ಥಿಕವಾಗಿ ಬೆಳೆಯಬೇಕೆಂಬುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ” ಎಂದು ತಿಳಿಸಿದರು.

ಶೈಲಜಾ ಭಿಂಗೆ ಅವರು ಮಾತನಾಡಿ ಸಂಸ್ಥೆಯು ಸಮಾಜದಲ್ಲಿ ಮಹಿಳೆಯರ ಅಸ್ಮಿತೆ ಹಾಗೂ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಸಂಘಟನೆಯ ಕ್ರಿಯಾಶೀಲ ಕಾರ್ಯಕ್ರಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಸಂಸ್ಥೆಯು ರಜತ ಮಹೋತ್ಸವದತ್ತ ಮುನ್ನಡೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಒಂದು ಸುಂದರ ಹಿಂದಿ ಶಾಯರಿಯನ್ನು ಪ್ರಸ್ತಾಪಿಸಿ, “ಮುತ್ತುಗಳು ಚದುರಿ ಹೋಗುವುದು ಸಹಜ, ಆದರೆ ದಾರವು ಅವುಗಳನ್ನು ಒಟ್ಟಿಗೆ ಹಿಡಿದಿಡುತ್ತದೆ. ನಾವೆಲ್ಲರೂ ಆ ದಾರದಂತೆ ಒಟ್ಟಾಗಿ ನಿಂತು ಈ ಮಹಿಳಾ ವೇದಿಕೆಯನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಬೇಕು” ಎಂದು ಕರೆ ನೀಡುತ್ತಾ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಂತ್ರದೊಂದಿಗೆ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಬೈಟ್
ಈ ವೇಳೆ ವಿವಿಧ ಗಣ್ಯರು ಉಪಸ್ಥಿತರಿದ್ಧರು.
