ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕುಮಾರೇಶ್ವರ ರುಧ್ರಭೂಮಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಸಾರ್ವಜನಿಕರು ಅಂತ್ಯಕ್ರಿಯೆ ನಡೆಸಲು ತೀವ್ರ ಪರದಾಡುವಂತಾಗಿದೆ. ಸ್ಮಶಾನದಲ್ಲಿ ವಿದ್ಯುತ್ ದೀಪ ಹಾಗೂ ಕನಿಷ್ಠ ನೀರಿನ ವ್ಯವಸ್ಥೆಯೂ ಇಲ್ಲದಿರುವುದಕ್ಕೆ ಸಾರ್ವಜನಿಕರು ಸವದತ್ತಿ ಪುರಸಭೆಯ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕುಮಾರೇಶ್ವರ ರುಧ್ರಭೂಮಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೇ ಮೃತರ ಅಂತ್ಯಕ್ರಿಯೆ ಮಾಡಲು ಬಂದ ಸಾರ್ವಜನಿಕರು ಕಣ್ಣೀರಿನಲ್ಲೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಸೂರ್ಯ ಮುಳುಗುತ್ತಿದ್ದಂತೆ ಇಡೀ ರುಧ್ರಭೂಮಿ ಕತ್ತಲಾವೃತಗೊಳ್ಳುತ್ತಿದ್ದು, ಕತ್ತಲಲ್ಲೇ ಮೊಬೈಲ್ ಬೆಳಕಿನಲ್ಲಿ ಅಂತ್ಯಸಂಸ್ಕಾರ ಮಾಡುವ ದುಸ್ಥಿತಿ ಎದುರಾಗಿದೆ; ಜೊತೆಗೆ ಕನಿಷ್ಠ ನೀರಿನ ಸೌಲಭ್ಯವೂ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಸತ್ತ ಮೇಲೂ ನೆಮ್ಮದಿಯ ಅಂತ್ಯಕ್ರಿಯೆಗೆ ಜಾಗ ಕಲ್ಪಿಸದ ಸವದತ್ತಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದು, ಸ್ಮಶಾನ ಜಮೀನಿಗೆ ತಕ್ಷಣವೇ ವಿದ್ಯುತ್ ಹಾಗೂ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಡಳಿತ ಮಂಡಳಿಯನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ.
