Savadatti

ಮೂರು ಬಿಟ್ಟ ಅಬಕಾರಿ ಇಲಾಖೆ – ರೈತ, ಗ್ರಾಮಸ್ಥರ ಜೀವದ ಜೊತೆ ಚೆಲ್ಲಾಟ

Share

ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಕಿಟದಾಳ ಗ್ರಾಮದ ಸರಹದ್ದಿನಲ್ಲಿ “ರಾಯಲ್ ಸೋಶಿಯಲ್ ಕ್ಲಬ್” ಹೆಸರಿನಲ್ಲಿ ಕ್ಲಬ್ ಅಂಡ್ ಬಾರ್ ತೆರೆಯಲು ಕೃಷ್ಣ ಗುದಗೋಪ್ಪ ಎಂಬುವರು ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಿಟದಾಳ ಗ್ರಾಮದಲ್ಲಿ ಈಗಾಗಲೇ ಗ್ರಾಮಸಭೆಯ ಮೂಲಕ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಒಂದು ವರ್ಷದಿಂದ ಹೋರಾಟ, ಅಧಿಕಾರಿಗಳಿಂದ ಕಣ್ಮುಚ್ಚಿ ಕುಳಿತಾಟ:
ಗ್ರಾಮದ ಸರಹದ್ದಿನಲ್ಲಿ ಮಧ್ಯ ಮಾರಾಟ ನಿಲ್ಲಿಸಬೇಕೆಂದು ನೂರಾರು ಕುಟುಂಬದ ಮಹಿಳೆಯರು, ಯುವಕರು, ರೈತರು ಸೇರಿ ಕಳೆದ ಒಂದು ವರ್ಷದಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಅರಟಗಲ್ ಗ್ರಾಮದ ಪಿಡಿಓ, ಸೌದತ್ತಿ ತಹಸಿಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನವರ್, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಎಸ್ಪಿಡಿಸಿ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಒತ್ತಡದಿಂದ ಲೈಸೆನ್ಸ್:
ಗ್ರಾಮಸ್ಥರ ಮಾತಿಗೆ ಕಿವಿಗೊಡದ ಕೃಷ್ಣ ಗುದಗೋಪ್ಪ, “ನಾನು ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಅವರ ಮಾಜಿ ಪಿಎ” ಎಂದು ಹೇಳಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡ ಹೇರಿ ಲೈಸೆನ್ಸ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗ ಕ್ಲಬ್ ಹೆಸರಿನಲ್ಲಿ ಮಧ್ಯ ಮಾರಾಟ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ.

ಅಧಿಕಾರಿಗಳ ದುರುಪಯೋಗ ಆರೋಪ:
ಪಿಡಿಓ, ತಹಸಿಲ್ದಾರ್, ಅಬಕಾರಿ ಅಧಿಕಾರಿಗಳು ಎಲ್ಲರೂ ಒಗ್ಗಟ್ಟಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಗ್ರಾಮಸ್ಥರ ಮಾತಿಗೆ ಬೆಲೆ ಕೊಡದೆ ಕ್ಲಬ್ ಪ್ರಾರಂಭಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೃಷ್ಣ ಗುದಗೋಪ್ಪ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಮಕ್ಕಳ ಭವಿಷ್ಯದ ಪ್ರಶ್ನೆ:
“ನಮ್ಮ ಮಕ್ಕಳ ಭವಿಷ್ಯದ ಸಲುವಾಗಿ ಗ್ರಾಮದಲ್ಲಿ ಮಧ್ಯ ಮಾರಾಟ ನಿಲ್ಲಿಸಲು ಸತತ ಪ್ರಯತ್ನ ಪಡುತ್ತಿದ್ದೇವೆ. ಆದರೆ ನಾಚಿಕೆಗೆಟ್ಟ ಅಧಿಕಾರಿಗಳು ಹಾಗೂ ಬೇರೆ ತಾಲೂಕಿನ ಶಾಸಕರು ಸೇರಿಕೊಂಡು ಮಧ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಅದಲ್ಲದೆ ಅಬಕಾರಿ ಇಲಾಖೆ ಅಧಿಕಾರಿಗಳು ದಿನಾಂಕ 23 4 2026ರಂದು ಮಧ್ಯದ ವಾಹನವನ್ನು ಕಳುಹಿಸಿ ಕೆಲವು ಹೊತ್ತುಗಳ ಕಾಲ ಗ್ರಾಮಸ್ಥರ ಹಾಗೂ ಸಣ್ಣದು ದಾರರ ನಡುವೆ ಉದ್ವಿಗ್ನ ಸ್ಥಿತಿ ಯಾಗಿತ್ತು ಸ್ಥಳಕ್ಕೆ ಬಂದ 112 ಪೊಲೀಸ್ ವಾಹನ ಉದ್ವಿಗ್ನ ಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಹೊರಟು ಹೋದರು ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ರಾತ್ರಿ 11:00 ಆದರೂ ಕೂಡ ಮಧ್ಯದ ವಾಹನವನ್ನು ಕರೆಸಿ ಮತ್ತೆ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡಿದ್ದಾರೆ ಗ್ರಾಮಸ್ಥರಿಗೆ ಮಾತಿಗೆ ಕಿವಿಕೊಡದಅಬಕಾರಿ ಇಲಾಖೆ ಅಧಿಕಾರಿಗಳು

ಗ್ರಾಮಸ್ಥರ ಖಡಕ್ ಎಚ್ಚರಿಕೆ:
ಇಷ್ಟೆಲ್ಲ ಆದರೂ ಯಾವುದಾದರೂ ಇಲಾಖೆ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಮುಂದೆ ಆಗುವ ಮಾನಹಾನಿ, ಪ್ರಾಣಹಾನಿ, ಇತರೆ ಅನಾಹುತಗಳಿಗೆ ನೇರವಾಗಿ ತಹಸಿಲ್ದಾರ್, ಅಬಕಾರಿ ಇಲಾಖೆ ಅಧಿಕಾರಿಗಳು, ಡಿಸಿ, ಪೊಲೀಸ್ ಅಧಿಕಾರಿಗಳು, ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಹಾಗೂ ಕೃಷ್ಣ ಗುದಗೋಪ್ಪ ನೇರ ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕಿಟದಾಳ ಗ್ರಾಮಸ್ಥರ ಹೋರಾಟಕ್ಕೆ ನ್ಯಾಯ ಸಿಗುತ್ತದೆಯೇ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

Tags:

error: Content is protected !!