ಅತ್ತ ಮಳೆ ಇಲ್ಲಾ, ಇತ್ತ ಅಭಿವೃದ್ಧಿ ಇಲ್ಲಾ, ಗ್ಯಾರಂಟಿ ಗುಂಗಲ್ಲಿರೋ ಸರ್ಕಾರ ಮಹಿಳೆಯರ ಪಾಲಿಗೆ 2000 ಗೃಹ ಲಕ್ಷ್ಮಿ ಹಣ ಹಾಕಿ ದೇವರಾಗೋಕೆ ಹೊರಟಿದೆ.ಒಂದು ಕಡೆ ಸರ್ಕಾರ ಮದ್ಯದ ಬೆಲೆ ಜಾಸ್ತಿ ಮಾಡಿ, ಮದ್ಯ ಪ್ರಿಯರಿಗೆ ಶಾಕ್ ನೀಡುತ್ತಿದ್ದರೆ ಇತ್ತ ಬಾರ್ ಮಾಲೀಕರು ದುಬಾರಿ ಹಣ ಪಡೆದು,ಕುಡುಕರ ಸಂಘಕ್ಕೆ ಭಾರಿ ಅನ್ಯಾಯ ಮಾಡಲು ಹೊರಟಿವೆ.

ಅಥಣಿ ಅಬಕಾರಿ ಇಲಾಖೆ ವ್ಯಾಪ್ತಿಯ ಮೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ಯದಂಗಡಿಯಲ್ಲಿ MRP ದರಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.ಇದು ಸರ್ಕಾರದ ಆದೇಶದನ್ವಯ ಮದ್ಯದಂಗಡಿಗೆ ಫಲಕ ಹಾಕದೆ ಕಾನೂನು ನಿಯಮಕ್ಕೂ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ತೆಗೆದುಕೊಂಡಿರುವ ನಿರ್ಧಾರ ಜಿಲ್ಲೆಯದ್ಯಾಂತ ಪ್ರಶಂಸೆಗೆ ಕಾರಣವಾಗಿದೆ. ಆದ್ರೆ ಅಬಕಾರಿ ಇಲಾಖೆ ಮಾತ್ರ ಬಾರ್ ಮಾಲೀಕರ ವಿರುದ್ಧ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಇರೋದು ನಿಜಕ್ಕೂ ದುರಂತ.
