ಹುಬ್ಬಳ್ಳಿಯ ನಿವಾಸಿಯಾಗಿರುವ ಗಿರೀಶ ಗದಗೆಪ್ಪಗೌಡರವರು ಕರ್ನಾಟಕ ರಾಜ್ಯ ರೈತ ಸಂಘದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಂಘಕ್ಕೂ ಅವರಿಗೂ ಸಂಬಂಧವಿಲ್ಲ ಕೂಡಲೇ ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಉಚ್ಚಾಟಿತ ಗಿರೀಶ ಗದಗೆಪ್ಪಗೌಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ನಿವಾಸಿಯಾಗಿರುವ ಗಿರೀಶ ಗದಗೆಪ್ಪಗೌಡರವರು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರು ಎಂದು ಹೇಳಿಕೊಂಡು, ಜತೆಗೆ ತಮ್ಮ ವಾಹನಕ್ಕೆ ಬೋರ್ಡ್ ಅಲಕವಡಿಸಿಕೊಂಡು ಓಡಾಟ ಮಾಡುತ್ತಿದ್ದಾರೆ. ಆದರೆ ನಮ್ಮ ರೈತ ಸಂಘಕ್ಕೂ ಗದಗೆಪ್ಪಗೌಡರವರಿಗೂ ಯಾವುದೇ ಸಂಬಂಧವಿಲ್ಲ. ರೈತ ಸಂಘದ ಹೆಸರಿನಲ್ಲಿ ಇವರು ನಡೆಸುವ ಕಾರ್ಯಚಟುವಟಿಕೆಗಳು ಸಂಘಕ್ಕೆ ಮುಜುಗರ ತಂದೊಡ್ಡಿದ್ದು, ಜತೆಗೆ ರೈತ ಚಳುವಳಿಯ ಹೋರಾಟದ ವಾತಾವರಣ ಹಾಳು ಮಾಡಲು ಹೊರಟ್ಟಿದ್ದಾರೆ. ಅಲ್ಲದೆ ಇವರ ಮೇಲೆ ಕೆಲವು ಪೊಲೀಸ್ ಠಾಣೆಗಳಲ್ಲಿ ಗಂಭೀರ ಪ್ರಕರಣಗಳಿರುವುದ ಕೂಡಾ ಬೆಳಕುಗೆ ಬಂದಿದೆ. ಹಣದ ಹಪಾಹಪಿಯ ಮನಸ್ಸಿನ ಗಿರೀಶ ಗದಗೆಪ್ಪಗೌಡರವರನ್ನು ಈ ಕೂಡಲೇ ಪೊಲೀಸ್ ಇಲಾಖೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದೆ.
