Uncategorized

ಖಾನಾಪುರ ನಗರದಲ್ಲಿ 5 ದಿನ ನೀರು ಪೂರೈಕೆ ಬಂದ್: ಸಾರ್ವಜನಿಕರಿಗೆ ಸಹಕರಿಸಲು ಮುಖ್ಯಾಧಿಕಾರಿ ಮನವಿ

Share

ಖಾನಾಪುರ ನಗರದ ಸಾರ್ವಜನಿಕರೇ ಗಮನಿಸಿ, ಇಂದಿನಿಂದ ನಿಮ್ಮ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಲಕುಂಭದ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಜುಲೈ 2 ರಿಂದ 6 ರವರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಸ್ಥಗಿತಗೊಳ್ಳಲಿದ್ದು, ನಾಗರಿಕರು ಸಹಕರಿಸುವಂತೆ ನಗರ ಪಂಚಾಯತ್ ಮನವಿ ಮಾಡಿದೆ.

ಖಾನಾಪುರ ನಗರಕ್ಕೆ ನೀರು ಪೂರೈಸುವ ಮುಖ್ಯ ಜಲಕುಂಭದ (ವಾಟರ್ ಟ್ಯಾಂಕ್) ಸ್ವಚ್ಛತೆ ಹಾಗೂ ತುರ್ತು ಬಿಡಿ ದುರಸ್ತಿ ಕಾಮಗಾರಿಯನ್ನು ನಗರ ಪಂಚಾಯತಿಯು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 2ರ ಗುರುವಾರದಿಂದ ಜುಲೈ 6ರ ಸೋಮವಾರದವರೆಗೆ ಒಟ್ಟು ಐದು ದಿನಗಳ ಕಾಲ ನಗರದಲ್ಲಿ ನಿಯಮಿತ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ್ ಕುರಬೇತ್ ತಿಳಿಸಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ತಮಗೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ದಿನನಿತ್ಯದ ಬಳಕೆಗೆ ಹಾಗೂ ಕುಡಿಯಲು ಕೊಳವೆಬಾವಿಯ ನೀರನ್ನು ಕಾಯಿಸಿ, ಆರಿಸಿ ಬಳಸುವ ಮೂಲಕ ನಗರ ಪಂಚಾಯತಿಯೊಂದಿಗೆ ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Tags:

error: Content is protected !!