ಮಹಾನಗರ ಪಾಲಿಕೆಯ ಶೇಕಡಾ 5ರ ಯೋಜನೆಯಡಿ ದಿವ್ಯಾಂಗರ ಸ್ವಾವಲಂಬನೆಗೆ ಮಹತ್ವದ ಕೊಡುಗೆ ನೀಡಲಾಗಿದೆ. ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಹಾಗೂ ಮಹಾಪೌರರ ಸಮ್ಮುಖದಲ್ಲಿ 26 ದಿವ್ಯಾಂಗ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು, ಇದೇ ವೇಳೆ ಮಹಾಪಾಲಿಕೆಯ ಜನನ ಮರಣ ಸಹಾಯವಾಣಿ ಕೇಂದ್ರಕ್ಕೂ ಚಾಲನೆ ನೀಡಲಾಯಿತು.


ಮಹಾಪಾಲಿಕೆ ಶೇ. 5ರ ಯೋಜನೆಯಡಿ 38 ಲಕ್ಷ 98 ಸಾವಿರದ 700 ರೂಪಾಯಿಯ ಅನುದಾನದಲ್ಲಿ 26 ಫಲಾನುಭವಿಗಳಿಗೆ ತ್ರಿಚಕ್ರವಾಹನಗಳನ್ನು ವಿತರಣೆ ಮತ್ತು ಜನನ ಮರಣ ಅರ್ಜಿ ಸ್ವೀಕೃತಿ ಕೇಂದ್ರ ಮತ್ತು ಸಹಾಯವಾಣಿ ಕೇಂದ್ರದ ಲೋಕಾರ್ಪಣೆಯನ್ನು ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹಣುಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡ್ನೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಥೋಡ್, ನಗರಸೇವಕರು ಇನ್ನುಳಿದವರು ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಮಹಾಪಾಲಿಕೆ ಯೋಜನೆಯ 38 ಲಕ್ಷ 98 ಸಾವಿರದ 700 ರೂಪಾಯಿಯ ಅನುದಾನದಲ್ಲಿ 26 ದಿವ್ಯಾಂಗರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ಇದು ದಿವ್ಯಾಂಗರ ಸ್ವಾವಲಂಬನೆಗೆ ಪೂರಕವಾಗಲಿದೆ. ಆವಶ್ಯಕೆಯಿದ್ದ ದಿವ್ಯಾಂಗರು ಅರ್ಜಿ ಸಲ್ಲಿಸಿದರೇ, ಅವರಿಗೆ ಬೇಕಾದ ಸಹಾಯವನ್ನು ಮಾಡಲು ಮಹಾಪಾಲಿಕೆ ಮತ್ತು ಸರ್ಕಾರ ಬದ್ಧವಾಗಲಿದೆ ಎಂದರು. ಇನ್ನು ಕ್ರೀಡಾಳುಗಳಿಗೆ ಆವಶ್ಯಕ ವಸ್ತುಗಳನ್ನು ಪೂರೈಸಲು ಪರಿಷತ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಮಹಾಪೌರ ಪ್ರೀತಿ ಕಾಮಕರ ಅವರು ಮಹಾನಗರ ಪಾಲಿಕೆ ಶೇ. 5ರ ಯೋಜನೆಯಡಿ ಮಹಾನಗರ ಪಾಲಿಕೆಯೂ 26 ದಿವ್ಯಾಂಗರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದ್ದು, ಇದರ ಸದುಪಯೋಗವನ್ನು ದಿವ್ಯಾಂಗರು ಪಡೆದುಕೊಳ್ಳಬೇಕೆಂದರು.
ಇನ್ನು ಉಪಮಹಾಪೌರ ಹಣುಮಂತ ಕೊಂಗಾಲಿ ಅವರು ಮಹಾನಗರ ಪಾಲಿಕೆಯಿಂದ ಈಗಾಗಲೇ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಿಗೂ ಸಹಾಯವನ್ನು ಮಾಡಲಾಗುತ್ತಿದೆ ಎಂದರು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸೇವಕರು, ಅಧಿಕಾರಿಗಳು, ಫಲಾನುಭವಿಗಳು ಇನ್ನುಳಿದವರು ಉಪಸ್ಥಿತರಿದ್ಧರು.
