DEATH

ನಿವೃತ್ತ ಶಿಕ್ಷಕ ಬಿ. ವಿ. ಗಡಾದ್ ನಿಧನ

Share

ಖಾನಾಪುರ ಮೂಲತಃ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದವರಾಗಿದ್ದು, ಸದ್ಯ ಖಾನಾಪುರದ ವಿದ್ಯಾನಗರದಲ್ಲಿ ವಾಸವಾಗಿದ್ದ ಶಿವಾಜಿನಗರ ಮರಾಠಿ ಶಾಲೆಯ ನಿವೃತ್ತ ಕನ್ನಡ ಶಿಕ್ಷಕ ಬಿ. ವಿ. ಗಡಾದ್ (೬೩ ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ (ದಿನಾಂಕ ೨೩) ನಿಧನರಾಗಿದ್ದಾರೆ.

ಮೃತರು ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕಿ ಶ್ರೀಮತಿ ಗಡಾದ್ ಅವರ ಪತಿಯಾಗಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಅವರ ಸ್ವಗ್ರಾಮವಾದ ನೇಗಿನಹಾಳದಲ್ಲಿ ನೆರವೇರಿಸಲಾಯಿತು. ಮೃತರು ಪತ್ನಿ, ಪುತ್ರಿ, ತಾಯಿ, ಸಹೋದರ, ಅತ್ತಿಗೆ ಹಾಗೂ ಭಾತೃವ್ಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:

error: Content is protected !!