Belagavi

ಗೋರಕ್ಷಕರ ಬಿಡುಗಡೆಗೆ ಆಗ್ರಹ: ಬೆಳಗಾವಿ ಡಿಸಿ ಕಚೇರಿಗೆ ಕಾಮಧೇನು ಅಯ್ಯಪ್ಪ ಸೇವಾ ಸಂಘದಿಂದ ಮನವಿ; ಉಗ್ರ ಹೋರಾಟದ ಎಚ್ಚರಿಕೆ!

Share

ಮಧ್ಯಪ್ರದೇಶದಲ್ಲಿ ಗೋರಕ್ಷಕರ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಕಾಮಧೇನು ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರು ಇಂದು ಬೆಳಗಾವಿ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಹತ್ವದ ಮನವಿ ಪತ್ರ ಸಲ್ಲಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕಳೆದ 15 ದಿನಗಳ ಹಿಂದೆ 14 ಜನ ಗೋರಕ್ಷಕರ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ, ಬೆಳಗಾವಿಯ ಕಾಮಧೇನು ಅಯ್ಯಪ್ಪ ಸೇವಾ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.

ನಿರಂತರವಾಗಿ ಗೋರಕ್ಷಕರನ್ನೇ ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಪದಾಧಿಕಾರಿಗಳು, ಬಂಧಿತ 14 ಗೋರಕ್ಷಕರಿಗೆ ಮುಂಬರುವ ಐದಾರು ದಿನಗಳಲ್ಲಿ ಕಾನೂನುಬದ್ಧವಾಗಿ ಜಾಮೀನು ನೀಡಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲಾದ್ಯಂತ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯು ಇದೇ ವೇಳೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಪ್ರಮುಖ ಗೋರಕ್ಷಕರಾದ ನೀಲೇಶ್, ಪ್ರಕಾಶ್ ಲಾಡವ, ಆನಂದ್ ನವಲೆ, ನಾಗರಾಜ್ ಕಮಲಾಪುರ್, ಕಿರಣ್, ಮಹೇಶ್ ಹಾಗೂ ಹಿತೇಶ್ ಸೇರಿದಂತೆ ಕಾಮಧೇನು ಅಯ್ಯಪ್ಪ ಸೇವಾ ಸಂಘದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!