Dharwad

4ವರ್ಷದ ಹಿಂದೆ ಗಿರಿವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಬಂದವರ ಮೇಲೆ ಗಿರವಿದಾರನಿಂದ ಫೈರಿಂಗ್, ಮೂವರಿಗೆ ಗಾಯ..

Share

4ವರ್ಷದ ಹಿಂದೆ ಗಿರಿವಿ ಇಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬಂದ ಚಿನ್ನದ ಮಾಲೀಕರ ಮೇಲೆ ಗಿರವಿದಾರ ಫೈರಿಂಗ ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.

ಧಾರವಾಡದ ಜೀಗಿರಿವಾಡ ಮೂಲದ ಸಿದ್ದಪ್ಪನಿಗೆ ಹೊಟ್ಟೆಗೆ ಗುಂಡು ತಾಕಿದರೆ, ನಿಂಗಪ್ಪನಿಗೆ ಹೊಟ್ಟೆ ಹಾಗೂ ಕಾಲಿಗೆ ಗುಂಡು ತಗುಲಿದ, ಈ ಗಲಾಟೆ ಸಂದರ್ಭದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶ್ರದ್ಧಾ ಬೈಯಪ್ಪನವರ ಎಂಬ 10 ವಿದ್ಯಾರ್ಥಿನಿ ಖಾಲಿಗೂ ಬುಲೆಟ್ ತಾಗಿ ಗಾಯವಾಗಿದೆ. ಗರಗ ಗ್ರಾಮದ ಜ್ಯುವೆಲ್ಲರಿ ಶಾಪ್ ಮಾಲೀಕ ಮೌನೇಶ್‌ ಪತ್ತಾರ ಎಂಬುವವರ ಬಳಿ ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ ಹಾಗೂ ಆತನ ಪುತ್ರ ಸಿದ್ದಪ್ಪ ಹೊರಕೇರಿ ಎಂಬುವವರು 40 ಗ್ರಾಂ ಚಿನ್ನವನ್ನು 60 ಸಾವಿರಕ್ಕೆ ಗಿರಿವಿ ಇಟ್ಟಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಇಬ್ಬರೂ ಮೌನೇಶ್‌ ಪತ್ತಾರ ಬಳಿ ಚಿನ್ನ ಅಡವಿಟ್ಟಿದ್ದರು. ಈಗ ಹಣ ವಾಪಸ್ ಕೊಟ್ಟು ಚಿನ್ನ ಬಿಡಿಸಿಕೊಳ್ಳಲು ನಿಂಗಪ್ಪ ಹಾಗೂ ಸಿದ್ದಪ್ಪ ಮುಂದಾಗಿದ್ದರು. ಚಿನ್ನ ಕೊಡಿ ಇಲ್ಲವೇ ಪ್ರಸ್ತುತ ಚಿನ್ನದ ದರವನ್ನಾದರೂ ನೀಡಿ ಎಂದು ಇಬ್ಬರೂ ಕೇಳಿದ್ದರು. ಆದರೆ, ಮೌನೇಶ್, ನಿಮ್ಮ ಚಿನ್ನ ಮುರುಗಡೆಯಾಗಿದೆ ಎಂದು ಹೇಳಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದಿದ್ದರಿಂದ ಮೌನೇಶ್ ಪತ್ತಾರ ಎಂಬಾತ ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಫೈರಿಂಗ್ ಮಾಡಿದ್ದಾನೆ. ಸದ್ಯ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದು, ಈ ಕುರಿತು ಗರಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!