Belagavi

ಮರಾಠಾ ಮಂಡಳ್ ಪಾಲಿಟೆಕ್ನಿಕ್‌ನಲ್ಲಿ ಯೋಗ ದಿನಾಚರಣೆ: ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ!

Share

ಬೆಳಗಾವಿಯ ಮರಾಠಾ ಮಂಡಳ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿಯಾಗಿ ಜರುಗಿದೆ.

ಕಾಲೇಜಿನ ಆವರಣದಲ್ಲಿ ನಡೆದ ಈ ವಿಶೇಷ ಯೋಗ ಶಿಬಿರದಲ್ಲಿ ಮೋಹನ್ ಬಾಗೇವಾಡಿ ಹಾಗೂ ಪತಂಜಲಿ ಯೋಗ ತಂಡದ ನುರಿತ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ವಿವಿಧ ಆಸನಗಳು, ಪ್ರಾಣಾಯಾಮ ಮತ್ತು ವಿಶ್ರಾಂತಿ ವ್ಯಾಯಾಮಗಳನ್ನು ಪ್ರತ್ಯಕ್ಷವಾಗಿ ಪ್ರದರ್ಶಿಸಿ ಕಲಿಸಿಕೊಟ್ಟರು. ದೈಹಿಕ ಫಿಟ್‌ನೆಸ್, ಮಾನಸಿಕ ನೆಮ್ಮದಿ ಹಾಗೂ ಶಿಸ್ತುಬದ್ಧ ಜೀವನ ಶೈಲಿಗೆ ಯೋಗ ಎಷ್ಟು ಸಹಕಾರಿ ಎಂಬುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಆರ್. ಎಸ್. ಸೂರ್ಯವಂಶಿ ಅವರು, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ಒತ್ತಡ ಮುಕ್ತವಾಗಿರಲು ಯೋಗ ಅತ್ಯಗತ್ಯ ಎಂದರು. ಇನ್ನು ಈ ಯೋಗ ಶಿಬಿರದಲ್ಲಿ ಉಪ-ಪ್ರಾಂಶುಪಾಲರಾದ ಶ್ರೀಮತಿ ಆಶಾ ತೋರ್ವಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ಹಾಗೂ 375ಕ್ಕೂ ಹೆಚ್ಚು ಪ್ರಥಮ ವರ್ಷದ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಯೋಗಾಭ್ಯಾಸ ಮಾಡಿದರು. ಇಡೀ ಕಾಲೇಜು ಆವರಣದಲ್ಲಿ ಸಕಾರಾತ್ಮಕ ಮತ್ತು ಶಕ್ತಿಯುತ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ದೀಕ್ಷಾ ಕಾರ್ಯಕ್ರಮದ ಸಂಯೋಜಕರಾದ ಗೌರಿ ಉಪ್ಪಿನ್ ಅವರು, ಯಶಸ್ವಿಯಾಗಿ ಯೋಗ ತರಬೇತಿ ನೀಡಿದ ಮೋಹನ್ ಬಾಗೇವಾಡಿ ಹಾಗೂ ಅವರ ತಂಡಕ್ಕೆ ವಂದನಾರ್ಪಣೆ ಮಾಡಿದರು.

Tags:

error: Content is protected !!