Khanapur

ಖಾನಾಪುರ: ನಂದಗಡದಲ್ಲಿ ತಾಲೂಕು ಮಟ್ಟದ ‘ಇಸ್ತಿಮಾ’ ಕೂಟಕ್ಕೆ ಭರ್ಜರಿ ಸಿದ್ಧತೆ!

Share

ಖಾನಾಪುರ ತಾಲೂಕಿನ ನಂದಗಡದಲ್ಲಿ ತಾಲೂಕು ಮಟ್ಟದ ಮುಸ್ಲಿಂ ಬಾಂಧವರ ಪವಿತ್ರ ಇಸ್ತಿಮಾ ಕೂಟಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇಸ್ಲಾಂ ಧರ್ಮದ ಧರ್ಮಗುರುಗಳ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಮಹಾಕೂಟದ ಯಶಸ್ಸಿಗಾಗಿ ತಾಲೂಕಿನ ಮುಖಂಡರು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಖಾನಾಪುರ ತಾಲೂಕಿನ ನಂದಗಡದ ರಾಮಾಪುರದಲ್ಲಿರುವ ಎನ್ ಆರ್ ಇ ಸಂಸ್ಥೆಯ ಮೈದಾನದಲ್ಲಿ ತಾಲೂಕು ಮಟ್ಟದ ಮುಸ್ಲಿಂ ಬಾಂಧವರ ಇಸ್ತಿಮಾ ಧಾರ್ಮಿಕ ಕೂಟದ ಆಯೋಜನೆಗೆ ಭರ್ಜರಿ ಸಿದ್ಧತೆಗಳು ಭರದಿಂದ ಸಾಗಿವೆ. ಹಿರಿಯರ ಮಾರ್ಗದರ್ಶನದಲ್ಲಿ ಎರಡು ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆಯಲಿರುವ ಈ ಇಸ್ತಿಮಾ ಕೂಟದಲ್ಲಿ ಇಸ್ಲಾಂ ಧರ್ಮದ ಪ್ರಮುಖ ಧರ್ಮಗುರುಗಳು ಪಾಲ್ಗೊಂಡು ವಿಶೇಷ ಮಾರ್ಗದರ್ಶನ ಹಾಗೂ ಧರ್ಮೋಪದೇಶ ನೀಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮುಸ್ಲಿಂ ಸಮಾಜದ ಮುಖಂಡ ಹಾಗೂ ಖಾಜಿಗಲ್ಲಿ ಜಮಾತ್ ಮೌತ್ವಲಿ ಮಹಮ್ಮದ್ ಶಫೀ ಖಾಜಿ ಅವರು, ತಾಲೂಕಿನ ಜವಾಬ್ದಾರಿಯುತ ಕಾರ್ಯಕರ್ತರು ಈಗಾಗಲೇ ಧಾರ್ಮಿಕ ಕೂಟದ ಯಶಸ್ಸಿಗಾಗಿ ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಉತ್ಸಾಹದಿಂದ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾಗಿ, ಖಾನಾಪುರ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಇಸ್ತಿಮಾ ಕೂಟದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.

Tags:

error: Content is protected !!