Belagavi

ರಾಜಕೀಯ ಪ್ರಭಾವ ಬಳಸಿ ನೊಂದ ಯುವತಿಯೊಬ್ಬಳ ಖಾಸಗಿ ಫೋಟೋ ವೈರಲ್ ಬೆದರಿಕೆ

Share

ಬೆಳಗಾವಿಯಲ್ಲಿ ಸಚಿವರ ಹೆಸರು ಹಾಗೂ ರಾಜಕೀಯ ಪ್ರಭಾವ ಬಳಸಿ ನೊಂದ ಯುವತಿಯೊಬ್ಬಳಿಗೆ ಬೆದರಿಕೆ ಹಾಕಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಸದ್ಯ ಜೀವನ-ಮರಣ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್ ನಾಯಕಿ ಆಯೇಷಾ ಸನದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಸಲೀಂ ಕಿಲ್ಲೇದಾರ್ ಪರವಾಗಿ ಕಾಂಗ್ರೆಸ್ ನಾಯಕಿ ಆಯೇಷಾ ಸನದಿ ಪೀಡಿತ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ನ್ಯಾಯ ಕೇಳಿದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ” ಹೆದರಿಸಿರುವ ಆಯೇಷಾ, ತನಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಕಚೇರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಬಲವಾದ ಪ್ರಭಾವವಿದ್ದು, ಯಾವುದೇ ಠಾಣೆಗೆ ಹೋದರೂ ದೂರು ದಾಖಲಾಗದಂತೆ ತಡೆಯುವ ಶಕ್ತಿ ತನಗಿದೆ ಎಂದು ದರ್ಪ ತೋರಿದ್ದಾರೆ ಎಂದು ಸಂತ್ರಸ್ತೆಯ ಪಾಲಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ರಾಜಕೀಯ ಒತ್ತಡ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಪೀಡಿತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಯೇಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೀಡಿತ ಯುವತಿಯ ಸಲೀಮ್’ರಜಾ ಸಯ್ಯದ್
ಅವರು ಆರೋಪಿಸಿದ್ದಾರೆ.

Tags:

error: Content is protected !!