“ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಹಾಗೂ ಮುಂಬೈನ ರಾಜ್ಯ ಮರಾಠಿ ವಿಕಾಸ್ ಸಂಸ್ಥೆ ಜಂಟಿಯಾಗಿ ಬೆಳಗಾವಿಯಲ್ಲಿ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು.
ಬೆಳಗಾವಿಯ ಶ್ರೀ ತುಕಾರಾಂ ಮಹಾರಾಜ್ ಸಾಂಸ್ಕೃತಿಕ ಭವನದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ನಗರ,
ಗ್ರಾಮೀಣ ಹಾಗೂ ಖಾನಾಪುರ ವಲಯದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಪ್ರಾ. ಆಡ್ವೊಕೇಟ್ ಸರಿತಾ ಸತೀಶ್ ಪಾಟೀಲ್, ವಿದ್ಯಾರ್ಥಿಗಳು ಸ್ವಭಾಷೆಯ ಮೇಲೆ ಪ್ರಭುತ್ವ ಸಾಧಿಸಿದರೆ ಜಗತ್ತಿನ ಯಾವುದೇ ಭಾಷೆಯನ್ನಾದರೂ ಸುಲಭವಾಗಿ ಕಲಿಯಬಹುದು ಎಂದರು. ಉತ್ತರ ಭಾರತದವರು ದೊಡ್ಡ ದೊಡ್ಡ ಸರ್ಕಾರಿ


ಹುದ್ದೆಗಳನ್ನು ಅಲಂಕರಿಸುತ್ತಿದ್ದು, ನಮ್ಮ ಭಾಗದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂದಿನ ಪೋಷಕರು ಮಕ್ಕಳನ್ನು ಸಮಾಜದಿಂದ ದೂರವಿಟ್ಟು ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ನಾಯಕತ್ವ ಗುಣವೇ ಇಲ್ಲದ ಪೀಳಿಗೆ ಸೃಷ್ಟಿಯಾಗುವ ಭೀತಿ ಇದೆ ಎಂದು ಎಚ್ಚರಿಸಿದರು. ಇದೇ ವೇಳೆ ಮ.ಎ.ಸಮಿತ್ಯ ನೂತನ ಅಧ್ಯಕ್ಷ ಪ್ರಕಾಶ್ ಮರಗಾಳೆ ಅವರನ್ನು ಯುವ ಸಮಿತಿ ವತಿಯಿಂದ

ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಲೋಜಿರಾವ್ ಅಷ್ಟೇಕರ್, ಗೋಪಾಲ್ ದೇಸಾಯಿ, ಶ್ರೀಕಾಂತ್ ಕದಂ, ಅಂಕುಶ್ ಕೇಸರ್ಕರ್, ಸುಧಾ ಭಾತ್ಕಾಂಡೆ ಹಾಗೂ ಶಿವಾನಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
