ಕೇಂದ್ರ ಕಾರಾಗೃಹದ ಜೈಲರೊಬ್ಬರು ತನ್ನ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿಂದು ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ವೈ- ಧಾರವಾಡ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ, ಸಿದ್ಧರಾಮಪ್ಪ ವಡ್ಡರ್ (33) ಆತ್ಮಹತ್ಯೆಗೆ ಶರಣಾದ ಜೈಲರ ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ಲೋಪದಡಿಯಲ್ಲಿ ಸಿದ್ಧರಾಮಪ್ಪ ಅಮಾನತಾಗಿದ್ದನ್ನು. ಅಮಾನತಾದ ಬಳಿಕ ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಆಗಿತ್ತು. ಆದರೆ ಇನ್ನು ಹೋಗಿ ವರದಿ ಮಾಡಿಕೊಂಡಿರಲಿಲ್ಲ, ಇವತ್ತು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಬೇರೆ ಊರಿಗೆ ಹೋದಾಗ ಸಿದ್ಧರಾಮಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದಂತೆ, ಆಸ್ಪತ್ರೆಗೆ ಬಂದು ಮಗನ ಹಾಗೂ ಪತಯ ದುಡುಕಿನ ನಿರ್ಧಾರ ನೆನೆದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

