Dharwad

ಪ್ರೊ.ಭಗವಾನ್ ವಿರುದ್ಧ ಮುತಾಲಿಕ್ ಕಿಡಿ….ಶ್ರೀರಾಮಚಂದ್ರ ದಶರಥನಿಗೆ ಹುಟ್ಟಿಲ್ಲ ಅನ್ನೋ ಪ್ರೊ.ಭಗವಾನನ್ನು ಒ… ಒಳಗೆ ಹಾಕಿ!!!

Share

ಶ್ರೀರಾಮಚಂದ್ರ ದಶರಥನಿಗೆ ಹುಟ್ಟಿಲ್ಲ ಎಂಬ ಪ್ರೊ.ಭಗವಾನ್ ಹೇಳಿಕೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಕಿಡಿ ಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್, ಪ್ರೊ.ಭಗವಾನ್ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆ. ಇಂತವರು ಬೇರೆಯವರ ನಂಬಿಕೆ, ವಿಶ್ವಾಸ ಹಾಳು ಮಾಡುವುದು ತಪ್ಪು. ನಮ್ಮ ನಂಬಿಕೆ ಹಾಳು ಮಾಡುವ ಭಗವಾನ್‌ನನ್ನು ಒದ್ದು ಒಳಗೆ ಹಾಕಬೇಕು. ನೀನು ನಿಮ್ಮಪ್ಪನಿಗೇ ಹುಟ್ಟಿದ್ದರೆ ಸಾಕ್ಷಿ ಕೊಡು ಎಂದು ಮುತಾಲಿಕ್‌ ಸವಾಲು ಹಾಕಿದರು. ಜತೆಗೆ ಭಗವಾನ್ ಪ್ರಭು ಶ್ರೀರಾಮನ ಬಗ್ಗೆ ಸಂಶಯ ಮೂಡಿಸುತ್ತಿದ್ದಾನೆ. ಸಾವಿರಾರು ವರ್ಷದಿಂದ ರಾಮನನ್ನು ಪೂಜಿಸುವ ಮಣ್ಣಿನಲ್ಲಿ ಹುಟ್ಟಿ ಈತ ರಾಮನ ಬಗ್ಗೆ ಮಾತನಾಡುತ್ತಿದ್ದಾನೆ. ದಶರಥ, ರಾಮನ ಬಗ್ಗೆ ಮಾತನಾಡಿದರೆ ನಾಲಿಗೆ ಕಿತ್ತು ಬಿಸಾಕುತ್ತೇವೆ. ರಾಮ, ರಾಮಾಯಣ, ಹಿಂದೂ ದೇವರ ಬಗ್ಗೆ ಮಾತನಾಡಿದರೆ ನಾವು ಸಹಿಸುವುದಿಲ್ಲ. ಸರ್ಕಾರ ಕೂಡಲೇ ಭಗವಾನ್ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕು. ಸುಮೋಟೋ ಹಾಕಿ ಆತನನ್ನು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು. ಇದೇವೇಳೆ ನೂತನ ಸಿಎಂ ಡಿಕೆಶಿಯವರ ಕುರಿತು ಮಾತನಾಡಿ, ಹಿಂದುತ್ವದ ವಿಚಾರದಲ್ಲಿ ಹೊಸ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಹೆಜ್ಜೆಗಳನ್ನಿಡುತ್ತಿದ್ದಾರೆ. ಎಲ್ಲರನ್ನೂ ಅವರು ಸಮನಾಗಿ ನೋಡಲಿ. ಹಿಂದಿನ ಸಿಎಂ ಅವರು ಅತಿಯಾದ ಮುಸ್ಲಿಂ ಓಲೈಕೆಯಿಂದ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳು ನಡೆದಿವೆ. ಹೀಗಾಗಿ ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲರನ್ನು ಸಮನಾಗಿ ನೋಡಬೇಕು ಎಂದು ಒತ್ತಾಯ ಮಾಡಿದರು.

Tags:

error: Content is protected !!