Dharwad

ಮುಸ್ಲಿಂ ಸಮುದಾಯ ಐದು ಮಂತ್ರಿ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪಿಲ್ಲ, ಸಂಪುಟದಲ್ಲಿ ಅವರಿಗೆ ಸ್ಥಾನ ನೀಡಬೇಕು- ಜಕ್ಕಪ್ಪನವರ.

Share

ಮುಸ್ಲಿಂ ಸಮುದಾಯದಿಂದ ನಮ್ಮ ಪಕ್ಷದಲ್ಲಿ 12ಜನ ಶಾಸಕರಿದ್ದಾರೆ. ಸಮುದಾಯ ಈಗ ಐದು ಮಂತ್ರಿ ಸ್ಥಾನ ಕೇಳುತ್ತಿದರುವುದರಲ್ಲಿ ತಪ್ಪಿಲ್ಲ, ಅವರಿಗೆ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ನೀಡಲು ಬದ್ಧವಾಗಿದೆ ಎಂದು ಪರಿಷತ್ ಸದಸ್ಯ ಎಫ್ ಹೆಚ್ ಜಕ್ಕಪ್ಪನವರ ಹೇಳಿದ್ದಾರೆ.

ಧಾರವಾಡದ ನವಲಗುಂದದಲ್ಲಿ ನಡೆದ SIR ಕುರಿತ ಬಿಎಲ್‌ಎ‌ಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತ ಸಮುದಾಯಕ್ಕೆ ಐದು ಸಚಿವ ಸ್ಥಾನ ನೀಡುವುದರಲ್ಲಿ ತಪ್ಪೇನು ಇಲ್ಲ, ಕೊಡಬೇಕು ಅವರಿಗು. ಮುಸ್ಲಿಂ ಸಮುದಾಯ ಯಾವಗ್ಲೂ ಪಕ್ಷಕ್ಕೆ ಮತ ನೀಡುತ್ತಾ ಬಂದಿದ್ದಾರೆ. ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡುವುದಕ್ಕೆ ಪಕ್ಷ ಬದ್ಧವಾಗಿದೆ. ಹೈಕಮಾಂಡ ಅದನ್ನು ಮಾಡೇ ಮಾಡುತ್ತದೆ ಎಂದರು. ಜತೆಗೆ ಸಚಿವ ಸಂಪುಟ ಎರಡನೇ ಪಟ್ಟಿ ಸೇರಲು ಪೈಪೋಟಿ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟ ಅಂದ್ಮೇಲೆ ಪೈಪೋಟಿ ಸಹಜ, ಕಲ್ಯಾಣ ಕರ್ನಾಟಕದಿಂದ 37 ಶಾಸಕರನ್ನು ನಾವು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳು, ಆದರೆ ಇದೇ ವಿಚಾರ ಬಿದಿ ರಂಪಾ ಮಾಡಬಾರದು. ಹೈಕಮಾಂಡ ಭೇಟಿ ಮಾಡಿ ಮಾತಾಡಿ, ತಮ್ಮ ಅಭಿಪ್ರಾಯ ಹೇಳಬೇಕು. ನಮ್ಮ ಭಾಗದ ಹಿರಿಯರಾದ ಹೆಚ್ ಕೆ ಪಾಟೀಪ್, ಶಿವಾನಂದ ಸೇರಿ ಹಲವರಿದ್ದಾರೆ. ಅವರಿಗೂ ಆದ್ಯತೆ ನೀಡಬೇಕಾಗುತ್ತದೆ. ಪಕ್ಷದ ಹೈಕಮಾಂಡ ಎಲ್ಲವನ್ನೂ ಅಳೆದು ತೂಗಿ ಅವಕಾಶ ನೀಡುತ್ತದೆ ಎಂದು ತಿಳಿಸಿದರು.

Tags:

error: Content is protected !!