Dharwad

ಧಾರವಾಡದಲ್ಲಿ ಕಳೆದ ಏ.10ರಂದು ನಡೆದಿದ್ದ ಫೈರೋಜ್ ಪಠಾಣ್ ಹತ್ಯೆ ಪ್ರಕರಣ.

Share

ಕಳೆದ ಏಪ್ರಿಲ್ 10ರಂದು ಧಾರವಾಡದಲ್ಲಿ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಸ್ಪತ್ರೆಯಲ್ಲಿ ರಾಜ್ಯ ಆತಿಥ್ಯ ವಿಡಿಯೋ ಈಗ ವೈರಲ್ ಆಗಿದ್ದು, ಧಾರವಾಡ ಕೇಂದ್ರ ಕಾರಾಗೃಹದ ಪೊಲೀಸ್ ಸಿಬ್ಬಂದಿಗಳ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಹೌದು…ಧಾರವಾಡದಲ್ಲಿ ಫೈರೋಜ್ ಪಠಾಣ್ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನ ಆರೋಪಿಗಳನ್ನು ಎರಡು ಹಂತದಲ್ಲಿ ಉಪನಗರ ಠಾಣೆಯ ಪೊಲೀಸರು ಬಂಧನ ಮಾಡಿದ್ದರು. ಕೊಲೆ ಪ್ರಕರಣದ ಆರೋಪಿ ನಂಬರ್ 10ರ ಮೈನೂದ್ದಿನ ನದಾಫ್ ಆರೋಗ್ಯ ಕಾರಣದಿಂದ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದವೇಳೆ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋ ವೈರಲಾಗಿದೆ. ಜತೆಗೆ ಮೈನೂದ್ದಿನ ಕಿವಿಗಳಿಗೆ ಬಡ್ಸ್ ಉಪಯೋಗಿಸಿ ಬೇರೆ ಬೇರೆಯವರೆಗೆ ಕಾಲ್ ಮಾಡುತ್ತಿದ್ದರುವುದು, ಬೆಡ್ ಮೇಲೆ ಮದ್ಯದ ಬಾಟ ಇರುವುದು ವಿಡಿಯೋದಲ್ಲಿ ಕಂಡಿದ್ದು ಇದೂ ಈಗ ಸಾರ್ವಜನಿಕರ ಪ್ರಶ್ನೆ ಮಾಡುವಂತಾಗಿದೆ. ಇನ್ನೂ ಕೊಲೆ ಹಿಂದೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಆರೋಪವಿದ್ದು, ಈಗಾಗಲೇ ಬಂಧನ ಭೀತಿಯಿಂದ ಇಸ್ಮಾಯಿಲ್ ಹೊರದೇಶಕ್ಕೆ ಪರಾರಿಯಾಗಿದ್ದಾನೆ. ಇನ್ನೊಂದು ಕಡೆ ಇಸ್ಮಾಯಿಲ್ ಸಂಬಂಧಿಯಾಗಿರುವ ಕೊಲೆ ಆರೋಪಿ ಮೈನೂದ್ದಿನ್ ಆಸ್ಪತ್ರೆಯಲ್ಲಿ ರಾಜ್ಯಾ ಆತಿಥ್ಯ ಸಿಗುತ್ತಿರುವುದು ಪೊಲೀಸರ ಈ ನಡೆ ಈಗ ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.

Tags:

error: Content is protected !!