Athani

ಮಣ್ಣು ಅಕ್ರಮ ಗಣಿಗಾರಿಕೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ;ಜೆಸಿಬಿ ಸಹಿತ ಮೂರು ಟಿಪ್ಪರ್ ಜಪ್ತಿ

Share

ಅಥಣಿ ತಾಲೂಕಿನಲ್ಲಿ ಮಣ್ಣು ಅಕ್ರಮ ಗಣಿಗಾರಿಕೆ ವಿರುದ್ಧ ಇನ್ ನ್ಯೂಸ್ ಸಾಲು ಸಾಲು ವರದಿಗಳನ್ನು ಬಿತ್ತರಿಸಿದೆ. ವರದಿ ಬಳಿಕ ಅಲರ್ಟ್ ಆದ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಅಥಣಿ ತಾಲೂಕಿನ ನಾಗನೂರು ಪಿ ಕೆ ಗ್ರಾಮದ ವ್ಯಾಪ್ತಿಯ ಕೃಷ್ಣ ನದಿ ಪಕ್ಕದ ಸರ್ವೇ ನಂ 204 ಕರ್ನಾಟಕ ನೀರಾವರಿ ನಿಗಮದ ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಒಂದು ಜೆಸಿಬಿ ಹಾಗೂ ಮೂರು ಟಿಪ್ಪರ್ ಗಳನ್ನ ಅಥಣಿ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ತಡ ರಾತ್ರಿ ಭೂಗಳ್ಳರೂ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ತಕ್ಷಣ ಅಥಣಿ ಪೊಲೀಸ್ ರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ವಾಹನ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ರು ಮತ್ತು ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿಗಳು ಬಿಡು ಬಿಟ್ಟಿದ್ದು ತನಿಖೆ ಮುಂದುವರೆದಿದೆ.ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಥಣಿ ತಹಸೀಲ್ದಾರ್ ಸಿದ್ರಾಯ ಬೋಸಗಿ ಹಾಗೂ DYSP ಪ್ರಶಾಂತ ಮುನ್ನೊಳ್ಳಿ ಮಾಹಿತಿ ನೀಡಿದ್ದಾರೆ.

Tags:

error: Content is protected !!