ಅಥಣಿ:ತಾಲೂಕಿನ ಜನವಾಡ ಗ್ರಾಮದ ಹೊರವಲಯದ ಕೃಷ್ಣ ನದಿ ಪಕ್ಕದಲ್ಲಿ ನಡೆಯುತ್ತಿದ್ದ ಮಣ್ಣು ಅಕ್ರಮ ಸಾಗಾಟ ವಿಚಾರವಾಗಿ ಇನ್ ನ್ಯೂಸ್ ವರದಿ ಬಿತ್ತರಿಸಿತ್ತು, ವರದಿ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದ ಸರ್ವೇ ನಂ,194/1,ಸಂಗಪ್ಪ ಪಾನಶೆಟ್ಟಿ ಮಾಲೀಕತ್ವದ 9 ಗುಂಟೆ ಹಾಗೂ ಕರ್ನಾಟಕ ನೀರಾವರಿ ನಿಗಮದ 13 ಗುಂಟೆ ಭೂಮಿಯಲ್ಲಿ ಭಾರಿ ಪ್ರಮಾಣದ ಮಣ್ಣು ಅಕ್ರಮವಾಗಿ ಸಾಗಾಟ ಮಾಡಿರುವ ವರದಿ ಕಲೆ ಹಾಕಿದ್ದು ತನಿಖೆ ಮುಂದು ವರೆದಿದೆ.


ಇದೆ ವಿಚಾರವಾಗಿ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಸೂಕ್ತ ತನಿಖೆ ನಡೆಸಿ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಅಕ್ರಮವಾಗಿ ಮಣ್ಣು ಸಾಗಾಟ ವಿಚಾರದ ಬಗ್ಗೆ ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಥಣಿ ತಹಸೀಲ್ದಾರ್ ಸಿದ್ದರಾಯ ಭೋಸಗಿ ಸೂಚನೆ ನೀಡಿದ್ದು.ಭೂ ಮಾಲಿಕ ಹಾಗೂ ವಾಹನ ಮಾಲೀಕರಿಗೂ ಬಿಸಿ ಮುಟ್ಟಲಿದೆ.
