BELAGAVI

ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಫೆಡರೇಷನ್ ಕಪ್‌ಗೆ ಬೆಳಗಾವಿ ವೀರರ ಲಗ್ಗೆ!

Share

ಪಂಜಾಬ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ 15ನೇ ಫೆಡರೇಷನ್ ಕಪ್ ದೇಹದಾರ್ಢ್ಯ ಸ್ಪರ್ಧೆಗೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಕುಂದಾನಗರಿ ಬೆಳಗಾವಿಯ ಪ್ರತಿಭೆಗಳು ಸಿಂಹಪಾಲನ್ನು ಪಡೆದುಕೊಂಡಿದ್ದಾರೆ. ರಾಜ್ಯವನ್ನು ನಮ್ಮ ಬೆಳಗಾವಿಯ ಪಟುಗಳು ಪ್ರತಿನಿಧಿಸಲು ಆಯ್ಕೆಗೊಂಡಿದ್ದಾರೆ.

ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಶನ್ ಮತ್ತು ಪಂಜಾಬ್ ಅಮಾಚುರ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ವತಿಯಿಂದ ಜೂನ್ 12 ಮತ್ತು 13 ರಂದು ಪಂಜಾಬ್‌ನ ಲುದಿಯಾನಾದಲ್ಲಿ 15ನೇ ಫೆಡರೇಷನ್ ಕಪ್ ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡಕ್ಕೆ ಬೆಳಗಾವಿಯ ಖ್ಯಾತ ದೇಹದಾರ್ಢ್ಯಪಟುಗಳಾದ ರೀಷಬ್ ವಸಿಷ್ಠ, ಪ್ರತಾಪ್ ಕಾಲಕುಂದ್ರಿಕರ, ಪ್ರವೀಣ್ ಮಜೂಕರ್, ಪ್ರಶಾಂತ್ ಖನ್ನೂಕರ ಹಾಗೂ ರಾಘವೇಂದ್ರ ಸೋಮಪುರ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಮಹಿಳಾ ವಿಭಾಗದಿಂದ ಕೇತರಕಿ ಪಾಟೀಲ್ ಅವರು ಸಹ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಕಠಿಣ ತರಬೇತಿ ನಡೆಸಿರುವ ಈ ತಂಡಕ್ಕೆ ಕ್ರೀಡಾ ಮಾರ್ಗದರ್ಶಕರಾದ ಅಜೀತ್ ಸಿದ್ಧಣ್ಣವರ, ಜೆ. ನೀಲಕಂಠ, ಡಾ. ಜಿ.ಡಿ. ಭಟ್, ದಿಲೀಪ್ ಕುಮಾರ್, ಆಸೀಫ್ ಕುಸಗಲ್ ಮತ್ತು ಸುನೀಲ್ ರಾವುತ್ ಅವರ ಅತ್ಯುತ್ತಮ ಮಾರ್ಗದರ್ಶನ ದೊರೆತಿದ್ದು, ಕ್ರೀಡಾಪಟುಗಳು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Tags:

error: Content is protected !!