ಪಾರ್ವತಿ ಬಾಳಾಸಾಹೇಬ್ ಪಾಟೀಲ್ ನಿಧನ

ಕಾಗವಾಡ ತಾಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ್ ಅವರ ಮಾತೋಶ್ರೀ ಪಾರ್ವತಿ ಬಾಳಾಸಾಹೇಬ್ ಪಾಟೀಲ್ ವಯಸ್ಸು 94 ಅವರು ಇಂದು ಶನಿವಾರ ಬೆಳಿಗ್ಗೆ ನಿಧನರಾದರು.

ಮೃತರು ಅಂತ್ಯಕ್ರಿಯೆ ಅವರ ಹುಟ್ಟೂರಾದ ಕಾಗವಾಡ ಮತಕ್ಷೇತ್ರದ ಚೀನಾಳ ಗ್ರಾಮದಲ್ಲಿ ಮಧ್ಯಾಹ್ನ ನೆರವೇರಿತು. ಈ ಸಮಯದಲ್ಲಿ ಅನೇಕ ರಾಜಕೀಯ ಮುಖಂಡರು, ಬೇರೆ ಬೇರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅನೇಕ ಕಾರ್ಯಕರ್ತರು ಪಾಲ್ಗೊಂಡು ಶ್ರೀಮಂತ ಪಾಟೀಲ ಇವರ ದುಃಖದಲ್ಲಿ ಪಾಲ್ಗೊಂಡರು. ಮೃತರ ಅಸ್ಥಿ ವಿಸರ್ಜನೆಯೂ ಸೋಮವಾರ ದಿನಾಂಕ 8 ರಂದು ನೆರವೇರಲಿದೆ.
