farewell

೩೭ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬೆಳಗುಂದಿ PHC ಆರೋಗ್ಯ ಅಧಿಕಾರಿ ಜಯಾ ಖೀಮಜಿ ಅವರಿಗೆ ಭವ್ಯ ಸನ್ಮಾನ

Share

ಬೆಳಗಾವಿ ತಾಲೂಕಿನ ಬೆಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸತತ ೩೭ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಆರೋಗ್ಯ ಅಧಿಕಾರಿ ಶ್ರೀಮತಿ ಜಯಾ ಪರಶುರಾಮ್ ಖೀಮಜಿ ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರ ಪ್ರದಿರ್ಘ ಸೇವೆಯನ್ನು ಗೌರವಿಸಲು ಬೆಳಗಾವಿಯ ಗಣೇಶಪುರ ರಸ್ತೆಯ ಲೋಕಮಾನ್ಯ ಮಂಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿ, ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.

ಜಯಾ ಪರಶುರಾಮ್ ಖೀಮಜಿ ಅವರು ೧೯೮೯ ರಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದು, ಗಣೇಶಪುರ ಮತ್ತು ಬೆನಕನಹಳ್ಳಿ ಭಾಗದಲ್ಲಿ ಅತ್ಯಂತ ಮಾನವೀಯ ದೃಷ್ಟಿಕೋನದಿಂದ ನಿರಂತರವಾಗಿ ತಳಮಟ್ಟದ ಜನರಿಗೆ ಸರಕಾರಿ ಆರೋಗ್ಯ ಸೇವೆಗಳನ್ನು ತಲುಪಿಸುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಮೇ ೩೧, ೨೦೨೬ ರಂದು ನಿವೃತ್ತರಾದ ಇವರ ಗೌರವಾರ್ಥ ಹಮ್ಮಿಕೊಂಡಿದ್ದ ಈ ನಿರೂಪ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ (DHO), ತಾಲೂಕು ಆರೋಗ್ಯ ಅಧಿಕಾರಿ (THO), ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಸೇವಿಕೆಯರು ಹಾಗೂ ಆಶಾ ಕಾರ್ಯಕರ್ತೆಯರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಬೆನಕನಹಳ್ಳಿ ಟೌನ್ ಪಂಚಾಯತ್ ಜನಪ್ರತಿನಿಧಿಗಳು, ಸ್ಥಳೀಯ ಹಿರಿಯ ನಾಗರಿಕರು ಮತ್ತು ಪ್ರತಿಷ್ಠಿತ ಗಣ್ಯರು ಉಪಸ್ಥಿತರಿದ್ದು, ಜಯಾ ಪರಶುರಾಮ್ ಖೀಮಜಿ ಅವರ ಕರ್ತವ್ಯ ನಿಷ್ಠೆಯನ್ನು ಮುಕ್ತಕಂಠದಿಂದ ಕೊಂಡಾಡಿ, ಅವರಿಗೆ ಮುಂದಿನ ನಿರಾಮಯ ಹಾಗೂ ಸುಖಕರ ಜೀವನಕ್ಕಾಗಿ ಶುಭ ಹಾರೈಸಿದರು.

Tags:

error: Content is protected !!