Bagalkot

ಬಾಗಲಕೋಟೆಯಲ್ಲಿ ‘ಡಾಗ್ ಕ್ಯಾಚಿಂಗ್ ಆಪರೇಷನ್’: ಅಸ್ಸಾಂ ತಂಡದಿಂದ ಬೀದಿನಾಯಿಗಳಿಗೆ ಬ್ರೇಕ್!

Share

ಅದು ಮುಳುಗಡೆ ನಗರ.ಆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ.ಕಳೆದ ನಾಲ್ಕೈದು ತಿಂಗಳಲ್ಲಿ ಮೂವರ ಜೀವ ಬಲಿ ಪಡೆದಿವೆ ಬೀದಿನಾಯಿಗಳು.ಕೆಟ್ಟ ಮೇಲೆ ಬುದ್ದಿ ಬಂತೆಂಬಂತೆ ನಗರಸಭೆ ಇದೀಗ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದೆ.ಡಾಗ್ ಕ್ಯಾಂಚಿಂಗ್ ಆಪರೇಷನ್ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ..

ಒಂದೆಡೆ ನಗರದ ಬೀದಿಗಳಲ್ಲಿ ಹಿಂಡು-ಹಿಂಡಾಗಿ ಸಂಚರಿಸುತ್ತಿರೋ ಬೀದಿನಾಯಿಗಳು.ಮತ್ತೊಂದೆಡೆ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ನಗರಸಭೆ.ಇನ್ನೊಂದೆಡೆ ನಗರದಲ್ಲಿ ಎಬಿಸಿ ಡಾಗ್ ಕ್ಯಾಚಿಂಗ್ ತಂಡದಿಂದ ಕಾರ್ಯಚರಣೆ.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದಲ್ಲಿ. ಹೌದು ಬಾಗಲಕೋಟೆ ನಗರದಲ್ಲಿ ಬೀದಿನಾಯಿಗಳ ಹಾವಳಿ ತುಂಬಾ ಹೆಚ್ಚಾಗಿದ್ದು,ಬೀದಿ ನಾಯಿ ದಾಳಿಗೆ ಮೂವರು ಜೀವ ಬಲಿಯಾಗಿದೆ.ಇದೀಗ ಬಾಗಲಕೋಟೆ ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ನಗರದಲ್ಲಿನ ಬೀದಿನಾಯಿಗಳ ನಿಯಂತ್ರಣ ಕಾರ್ಯಚರಣೆ ನಡೆಸಿದೆ…

ಇನ್ನು ಬಾಗಲಕೋಟೆ ನಗರಸಭೆ ವ್ಯಾಪ್ತಿಯ ನವನಗರ,ವಿದ್ಯಾಗಿರಿ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು.ಬೀದಿನಾಯಿಗಳ ನಿಯಂತ್ರಣಕ್ಕೆ ನಗರಸಭೆ ಅಸ್ಸಾಂ ನಿಂದ ಎಬಿಸಿ ಡಾಗ್ ಕ್ಯಾಚಿಂಗ್ ತಂಡ ಕರೆಯಿಸಿದ್ದು,ನಗರದಲ್ಲಿನ ಬೀದಿ ನಾಯಿಗಳನ್ನ ಸೆರೆ ಹಿಡಿದು ಅವುಗಳಿಗೆ ಸಂತಾನಹರಣ ಮತ್ತು ರೆಬಿಸ್ ಚುಚ್ಚು ಮದ್ದು ನೀಡಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಕಾರ್ಯಚರಣೆ ನಗರಸಭೆ ನಡೆಸಿದೆ.ಡಾಗ್ ಕ್ಯಾಚಿಂಗ್ ಆಪರೇಷನ್ ತಂಡ ಆಸ್ಸಾಂ ನಿಂದ ಬಂದಿದ್ದು ನಗರದಲ್ಲಿ 10 ತಂಡಗಳಾಗಿ ನವನಗರ, ವಿದ್ಯಾಗಿರಿ,ಹಳೆ ಬಾಗಲಕೋಟೆ ಭಾಗದಲ್ಲಿ ಏಕಕಾಲಕ್ಕೆ ಡಾಗ್ ಕ್ಯಾಚಿಂಗ್ ಆಪರೇಷನ್ ಶುರುಮಾಡಿದೆ.ಇದ್ರಿಂದ ನಗರದ ಜನತೆ ನಿಟ್ಟುಸಿರು ಬಿಡುವಂತಾಗಿದೆ….

ಒಟ್ಟಿನಲ್ಲಿ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದ,ಇನ್ನಷ್ಟು ಜೀವಹಾನಿ ಸಂಬವಿಸುವ ಮುನ್ನ ನಗರಸಭೆ ಎಚ್ಚೆತ್ತು ಬೀದಿ ನಾಯಿಗಳ ನಿಯಂತ್ರಣ ಕಾರ್ಯಚರಣೆ ನಡೆಸುತ್ತಿರೋದಕ್ಕೆ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಂತೂ ಸುಳ್ಳಲ್ಲ….

Tags:

error: Content is protected !!