Hukkeri

ಹುಕ್ಕೇರಿ : ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ – ನ್ಯಾಯಾಧೀಶ ಆದಿತ್ಯಾ ಕಲಾಲ

Share

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹುಕ್ಕೇರಿ ಕಿರಿಯ ಸಿವ್ಹಿಲ್ ನ್ಯಾಯಾಧೀಶ ಆದಿತ್ಯಾ ಕಲಾಲ ಹೇಳಿದರು.

ಹುಕ್ಕೇರಿ ತಾಲೂಕಾ ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ, ಸಾಮಾಜಿಕ ಮತ್ತು ಅರಣ್ಯ ಇಲಾಖೆ ಹಾಗೂ ತಾಲೂಕಾ ಆಡಳಿತ ವತಿಯಿಂದ ಕೋರ್ಟ ಆವರಣದಲ್ಲಿ ಸಿವ್ಹಿಲ್ ನ್ಯಾಯಾಧೀಶ ಆದಿತ್ಯಾ ಕಲಾಲ ಸಸಿ ನೆಟ್ಟು ಸಾರ್ವಜನಿಕರಿಗೆ ಸಸಿ ವಿತರಿಸುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಪರಿಸರ ಉಳುವಿಗಾಗಿ ನಾವೆಲ್ಲರೂ ಪಣ ತೋಡಬೇಕಾಗಿದೆ ಇತ್ತೀಚಿಗೆ ಪ್ಲಾಸ್ಟಿಕ್ ಮಾಲಿನ್ಯ ದಿಂದಾಗಿ ನಿಸರ್ಗ ಕಲ್ಮಶಗೊಂಡು ಜನರ ಆರೋಗ್ಯದದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ನಂತರ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಸಿ ನೀಡಲಾಯಿತು.
ಸಾಮಾಜಿಕ ಅರಣ್ಯ ಇಲಾಖೆ ಅಧೀಕಾರಿ
ಹನಮಂತ ಇಂಗಳಗಿ ಮಾತನಾಡಿ ಚನ್ನಾಗಿ ಮಳೆ ಬೇಳೆ ಬರಬೇಕಾದರೆ ನಾವು ಪರಿಸರ ಸ್ವಚ್ಚತೆಯೊಂದಿಗೆ ಗಿಡ ಮರಗಳನ್ನು ಬೆಳೆಯಬೇಕು ಎಂದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳವಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ,
ಅರಣ್ಯಾಧಿಕಾರಿಗಳಾದ ಟಿ ಎಲ್ ಸನದಿ, ಅಪರ ಸರ್ಕಾರಿ ವಕೀಲ ಎ ಸಿ ಕರೋಶಿ, ಉಪಾದ್ಯಕ್ಷ ಬಿ ಎಮ್ ಜಿನರಾಳೆ, ಕಾರ್ಯದರ್ಶಿ ಎಸ್ ಜಿ ನದಾಫ್, ವಿ ಎಲ್ ಗಸ್ತಿ , ಎ ಎ ಬಾಗೆವಾಡಿ, ಬಸವರಾಜ ಹುಂಡೆಕಾರ, ಶ್ರೀಮತಿ ಎ ಬಿ ಕುಲಕರ್ಣಿ, ಆಶಾ ಸಿಂಗಾಡಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!