ಹುಕ್ಕೇರಿ ತಾಲೂಕಿನಲ್ಲಿ ಸೋಯಾಬೀನ ಮತ್ತು ಗೋವಿನ ಜೋಳಗಳ ಬೀಜ ವಿತರಣೆ ಮಾಡಲಾಗುತ್ತಿದೆ ರೈತರು ಇದರ ಪ್ರಯೋಜನೆ ಪಡೆದುಕೋಳ್ಳ ಬೇಕು ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.


ಹುಕ್ಕೇರಿ ತಾಲೂಕು ಕೃಷಿ ಇಲಾಖೆಯಿಂದ ರೈತರಿಗೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ನಿಖಿಲ್ ಕತ್ತಿ ಬೀಜ ವಿತರಣೆ ಮಾಡುವ ಮೂಲಕ ಮುಂಗಾರು ಹಂಗಾಮಿಗೆ ಚಾಲನೆ ನೀಡಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು ಹುಕ್ಕೇರಿ ತಾಲೂಕಿನಲ್ಲಿ ಇನ್ನೂ ಮಳೆ ಅಭಾವ ಕಂಡು ಬಂದಿದೆ , ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆಯಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ ಹಾಗೂ ತಾಲೂಕಿನಲ್ಲಿ ಸಾಕಷ್ಟು ಬೀಜ ಸಂಗ್ರಹವಿದೆ ಮತ್ತು ಮೂರು ರೈತ ಸಂಪರ್ಕ ಕೇಂದ್ರಗಳ ಹಾಗೂ 39 ಪಿ ಕೆ ಪಿ ಎಸ್ ಮುಖಾಂತರ ಬೀಜ ವಿತರಿಸಲಾಗುವದು ರೈತರು ಆತಂಕ ಪಡುವ ಅವಶ್ಯವಿಲ್ಲಾ ಎಂದರು

ನಂತರ ರೈತರ ಸಭಾ ಭವನ ಉದ್ಘಾಟನೆ ಮಾಡಿ ಬಿತ್ತಿಪತ್ರ ಬಿಡುಗಡೆ ಗೋಳಿಸಿದರು.
ತಾಲೂಕಾ ಸಹಾಯಕ ಕೃಷಿ ನಿರ್ದೆಶಕ ಆರ್ ಬಿ ನಾಯ್ಕರ ಮಾತನಾಡಿ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಇಂದು ಚಾಲನೆ ನೀಡಲಾಗಿದೆ ಆದರೆ ತಾಲೂಕಿನಲ್ಲಿ ಇನ್ನೂ ಮಳೆ ಅಭಾವ ಕಂಡು ಬಂದಿಗೆ ಕಾರಣ ರೈತರು ಭೂಮಿಯ ತೇವಾಂಶ ಅರಿತು ಬಿತ್ತನೆ ಕಾರ್ಯ ಕೈಗೋಳ್ಳ ಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ರಾಜು ಮುನ್ನೋಳ್ಳಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು,ರೈತರು ಉಪಸ್ಥಿತರಿದ್ದರು.

