Hukkeri

ಹುಕ್ಕೇರಿ : ವಿಶ್ವ ಪರಿಸರ ದಿನದ ಆಚರಣೆಗೆ ಮಾರಕವಾದ ಹುಕ್ಕೇರಿ ಅರಣ್ಯ ಇಲಾಖೆ ಅಧಿಕಾರಿಗಳು.

Share

ಹುಕ್ಕೇರಿ ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಕಾರ್ಯದಿಂದ ವಿಶ್ವ ಪರಿಸರ ದಿನಕ್ಕೆ ಮಾರಕ ವಾಗಿದೆ ಎನ್ನಲಾಗುತ್ತಿದೆ.
ಜೂನ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗ ಅರಣ್ಯ ಇಲಾಖೆ ವತಿಯಿಂದ ರಸ್ತೆ ಮಾರ್ಗವಾಗಿ ಗುಂಡಿ ತೋಡಿ ಸಸಿ ನೆಡುವ ಕಾರ್ಯ ಮಾಡಲಾಗುತ್ತದೆ ಆದರೆ ಹುಕ್ಕೇರಿ ಸಾಮಾಜಿಕ ಅರಣ್ಯ ಇಲಾಖೆಯು ನಗರದ ಆಡಳಿತ ಭವನ ಹತ್ತಿರ ದಿಂದ ಹೋಗುವ ಬೆಳವಿ ರಸ್ತೆಯ ಪಕ್ಕದಲ್ಲಿ ಹೋದ ವರ್ಷ ನೆಟ್ಟ ಗಿಡಗಳನ್ನು ಕಿತ್ತು ಅದೆ ಸ್ಥಳದಲ್ಲಿ ಬೇರೆ ಸಸಿ ನೇಡುವ ಮೂಲಕ ಈ ವರ್ಷದ ಕ್ರಿಯಾ ಯೋಜನೆ ಪೂರ್ಣಗೋಳಿಸಲು ಹೋರಟಿದೆ. ಇದು ಗುತ್ತಿಗೆದಾರನ ಕರಾಮತ್ತೊ ಅಥವಾ ಅಧಿಕಾರಿಗಳ ಕೈ ಚಳಕವೋ ಗೋತ್ತಾಗಬೇಕಾಗಿದೆ.

ಈ ಕುರಿತು ಸಾರ್ವಜನಿಕರು ಅರಣ್ಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ,ವಿಶ್ವ ಪರಿಸರ ದಿನ ಆಚರಿಸುವ ಸಂದರ್ಭದಲ್ಲಿ ಅರಣ್ಯ ಸಂಪತ್ತು ಕಾಪಾಡುವ ಅರಣ್ಯ ಇಲಾಖೆ ಅಧಿಕಾರಿಗಳು ನೇಟ್ಟ ಗಿಡಗಳನ್ನು ಕಿತ್ತು ಹಾಕುತ್ತಿರುವದು ಎಷ್ಟು ಸಮಂಜಸ,ಇವರನ್ನು ಕೇಳಲು ಅಥವಾ ಇವರು ಮಾಡುವ ಕಾರ್ಯವನ್ನು ಗಮನಿಸಲು ಜನ ಪ್ರತಿನಿಧಿಗಳು ಇಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ.

ನಗರದ ಸಾಮಾಜಿಕ ವಲಯ ಅರಣ್ಯ ಇಲಾಖೆ ಕಛೇರಿಯಲ್ಲಿ ಸಿಬ್ಬಂದಿಗಳು ಇರುವದೆ ಅಪರೂಪವಾಗಿದೆ ಕೇವಲ ಡಿ ಗ್ರುಪ್ ನೌಕರರು ಮಾತ್ರ ಕಂಡು ಬರುತ್ತಾರೆ,ಇತ್ತಿಚಿಗೆ ಹೋಸದಾಗಿ ಆಗಮಿಸಿದ ಇಲಾಖೆ ಅಧಿಕಾರಿ ಕಛೇರಿಗೆ ಆಗಮಿಸುವದು ಅಪರೂಪವಾಗಿದೆ ಎನ್ನಲಾಗುತ್ತಿದೆ.
ಸರ್ಕಾರ ಪ್ರತಿ ವರ್ಷ ಸಸಿಗಳನ್ನು ನೇಡಲು ಸಾಕಷ್ಟು ಅನುದಾನ ನೀಡುತ್ತದೆ ಆದರೆ ಅಧಿಕಾರಿಗಳ ನಿಷ್ಕಾಳಜಿಯಿಂದ ಹಣ ದುರುಪಯೋಗ ವಾಗುತ್ತಿದೆ ಈ ಕುರಿತು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಮೌನ ವಹಿಸಲು ಏನು ಕಾರಣ, ಅವರು ಸ್ಥಳಕ್ಕೆ ಆಗಮಿಸಿ ಪರಶೀಲನೆ ಮಾಡಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಜರುಗಿಸ ಬೇಕು ಎಂದು ಜನರ ಒತ್ತಾಯವಾಗಿದೆ.

Tags:

error: Content is protected !!