ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಕಾಗವಾಡ-ಶೇಡಬಾಳ ರಸ್ತೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಮಗನ ಜೊತೆ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಎದುರಾದ ಯಮನಂತಹ ಕಾರು ವೃದ್ಧೆಯ ಜೀವವನ್ನು ಬಲಿಪಡೆದಿದೆ.

ಪೋಲಿಸ್ ಠಾಣೆ ವ್ಯಾಪ್ತಿಯ ಕಾಗವಾಡ ಶೇಡಬಾಳ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ, ಶೇಡಬಾಳ ಪಟ್ಟಣದ ತುಳಸಾಬಾಯಿ ಚೌಗುಲೆ (65) ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಮೃತ ಮಹಿಳೆಯುವ ಕಾಗವಾಡ ಪಟ್ಟಣದಿಂದ ಶೇಡಬಾಳ ಪಟ್ಟಣದ ತಮ್ಮ ಮನೆಗೆ ತನ್ನ ಮಗನೊಂದಿಗೆ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾಗವಾಡ ಪೋಲಿಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.
