ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾಗೂ ದರ ಇಳಿಸಲು ಆಗ್ರಹಿಸಿ ಧಾರವಾಡದಲ್ಲಿ ಎಸ್ಯುಸಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿವೇಕಾನಂದ ವೃತದಲ್ಲಿ ಎಸ್ಯುಸಿಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು. ಪೆಟ್ರೋಲ್ ಡಿಸೇಲ್ ಏರಿಕೆಯಿಂದಾಗಿ ಜನ ಸಾಮನ್ಯರಿಗೆ ದೊಡ್ಡ ಹೊಡೆತ ಬಿದಿದೆ. ಯುದ್ಧದ ನೆಪ ಮಾಡಿಕೊಂಡು ನಾಲ್ಕು ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡಬೇಕಾಗಿರುವುದು ಕೆಂದ್ರ ಸರ್ಕಾರದ ಕರ್ತವ್ಯ, ಬೇರೆ ದೇಶಗಳೊಂದಿಗೆ ಸರಿಯಾದ ಸ್ನೇಹ ಭಾವ ಹೊಂದಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಈಗ ಬೆಲೆ ಏರಿಕೆಯಿಂದ ನೇರವಾಗಿ ಮಧ್ಯಮ ವರ್ಗದ ಜನರು ಬೀದಿಗೆ ಬರುವಂತಾಗಿದೆ. ಡಿಸೇಲ್ ಪೆಟ್ರೋಲ್ ಏರಿಕೆಯಿಂದಾಗಿ ಪ್ರತಿಯೊಂದು ಸಾಮಗ್ರಿಗಳಲ್ಲಿ ಏರಿಕೆಯಾಗುತ್ತದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿತ್ತದೆ. ಹಾಗಾಗಿ ಈ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಇಳಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

