Khanapur

ಖಾನಾಪುರಕ್ಕೆ ದಕ್ಷ ಅಧಿಕಾರಿ ಬಸವರಾಜ ವಾಳದ ಎಸಿಎಫ್ ಆಗಿ ಎಂಟ್ರಿ: ಸುನೀತಾ ನಿಂಬರಗಿ ವರ್ಗಾವಣೆ!

Share

ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸುನೀತಾ ನಿಂಬರಗಿ ಅವರು ವರ್ಗಾವಣೆಗೊಂಡಿದ್ದಾರೆ. ಅವರ ತೆರವಾದ ಸ್ಥಾನಕ್ಕೆ ಬೆಳಗಾವಿಯಲ್ಲಿ ಕಾರ್ಯಯೋಜನೆ ಎಸಿಎಫ್ ಆಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಅಧಿಕಾರಿ ಬಸವರಾಜ ವಾಳದ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಖಾನಾಪುರ ಪ್ರಾದೇಶಿಕ ಅರಣ್ಯ ಉಪ ವಿಭಾಗದ ನೂತನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ACF) ಬಸವರಾಜ ವಾಳದ ಅವರು ನೇಮಕಗೊಂಡಿದ್ದು, ಸದ್ಯ ಕಾರ್ಯನಿರ್ವಹಿಸುತ್ತಿದ್ದ ಸುನೀತಾ ನಿಂಬರಗಿ ಅವರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಖಾನಾಪುರ ತಾಲೂಕಿನಲ್ಲಿ ವಲಯ ಅರಣ್ಯಾಧಿಕಾರಿಯಾಗಿ (RFO) ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿ ಸಾರ್ವಜನಿಕ ವಲಯದಲ್ಲಿ ಅಚ್ಚೊತ್ತಿದ ಛಾಪು ಮೂಡಿಸಿದ್ದ ಬಸವರಾಜ ವಾಳದ ಅವರು ಸದ್ಯ ಬೆಳಗಾವಿಯ ಕಾರ್ಯಯೋಜನೆ ವಿಭಾಗದಲ್ಲಿ ಎಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅರಣ್ಯ ಸಮೃದ್ಧ ತಾಲೂಕಾದ ಖಾನಾಪುರಕ್ಕೆ ಮತ್ತೊಮ್ಮೆ ದಕ್ಷ ಅಧಿಕಾರಿಯನ್ನೇ ಎಸಿಎಫ್ ಆಗಿ ನೇಮಕ ಮಾಡಿರುವುದು ತಾಲೂಕಿನ ಜನತೆಯಲ್ಲಿ ಹಾಗೂ ಪರಿಸರ ಪ್ರೇಮಿಗಳಲ್ಲಿ ವಿಶೇಷ ಕುತೂಹಲ ಮತ್ತು ಸಂತಸವನ್ನು ಮೂಡಿಸಿದೆ.

Tags:

error: Content is protected !!