Khanapur

ಖಾನಾಪುರ: ಜನಸ್ನೇಹಿ ಪಿಎಸ್‌ಐ ಬಾದಾಮಿ ಅವರಿಗೆ ನಿವೃತ್ತಿ ಸನ್ಮಾನ; ಈಶ್ವರ್ ಘಾಡಿ ಶ್ಲಾಘನೆ

Share

ಕಾನೂನಿನ ಚೌಕಟ್ಟಿನಲ್ಲಿ ಜನಸ್ನೇಹಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮನಗೆದ್ದಿದ್ದ ನಂದಗಡದ ಪಿಎಸ್‌ಐ ಬಾದಾಮಿ ಅವರು ಸೇವಾ ನಿವೃತ್ತಿಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಾನಾಪುರ ಬಾರ್ ಅಸೋಸಿಯೇಶನ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಘಾಡಿ ಅವರು ನಿವೃತ್ತ ಅಧಿಕಾರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ದಕ್ಷತೆಯಿಂದ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ಪಿಎಸ್‌ಐ ಬಾದಾಮಿ ಅವರಿಗೆ ಭವ್ಯ ವಿದಾಯದ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸತ್ಕರಿಸಿದ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಈಶ್ವರ್ ಘಾಡಿ ಅವರು ಮಾತನಾಡಿ, “ಠಾಣೆಗೆ ನೊಂದು ಬಂದವರನ್ನು ಕಾಕಾ, ಮಾಮಾ ಎಂದು ಪ್ರೀತಿಯಿಂದ ಮಾತನಾಡಿಸುತ್ತಾ, ಜನಸ್ನೇಹಿ ಅಧಿಕಾರಿಯಾಗಿ ಬಾದಾಮಿ ಅವರು ಮನೆಮಾತಾಗಿದ್ದರು” ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ನೂತನ ಪ್ರೊಬೇಷನರಿ ಪಿಎಸ್‌ಐ ಮಹಾನಂದಾ ಅವರನ್ನು ಕೂಡ ಸತ್ಕರಿಸಿ ಪ್ರೋತ್ಸಾಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಹಮ್ಮದ್ ಇಕ್ಬಾಲ್ ಬಸರೀಕಟ್ಟಿ, ಇಮ್ರಾನ್ ಚಾಂದವಾಲೆ, ವಹಾಬ್ ಬಸರೀಕಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!