ವಿಜೇತ ಪೈಲ್ವಾನರಿಗೆ ಭರ್ಜರಿ ಬಹುಮಾನಗಳ ವಿತರಣೆ
ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ ಶ್ರೀ ಜೈ ಹನುಮಾನ್ ದೇವರ ಒಕಳಿ ಮಹೋತ್ಸವದ ಅಂಗವಾಗಿ ಭವ್ಯ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಮ್ಮ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಮಲ್ಲಯುದ್ಧವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಕ್ರೀಡಾಭಿಮಾನಿಗಳು ಲಗ್ಗೆ ಇಟ್ಟಿದ್ದರು.


ವಿಜಯಪುರ ಜಿಲ್ಲೆಯ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಶ್ರೀ ಜೈ ಹನುಮಾನ್ ದೇವರ ಒಕಳಿ ಕಾರ್ಯಕ್ರಮದ ಅಂಗವಾಗಿ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕುಸ್ತಿ ಪಂದ್ಯದಲ್ಲಿ 15ಕ್ಕೂ ಹೆಚ್ಚು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ವಿಜೇತ ಕುಸ್ತಿಪಟುಗಳಿಗೆ ಗ್ರಾಮದ ಹಿರಿಯರು ಬಹುಮಾನ ವಿತರಿಸಿದರು. ಭಾರತದ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಮಲ್ಲಯುದ್ಧ ಕುಸ್ತಿಯನ್ನು ಜನರು ಉತ್ಸಾಹದಿಂದ ವೀಕ್ಷಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

