ಬೆಳಗಾವಿಯ ವಿವಿಧ ಕಾಲನಿಗಳಲ್ಲಿ ಬಾಂಡ್ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡಿರುವ ಬಡ ಕುಟುಂಬಗಳಿಗೆ ತಕ್ಷಣವೇ ವಿದ್ಯುತ್ ಮೀಟರ್ ಒದಗಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ ಒಂದು ವರ್ಷದಿಂದ ಕರೆಂಟ್ ಇಲ್ಲದೆ ನರಕಯಾತನೆ ಅನುಭವಿಸುತ್ತಿರುವ ನೂರಾರು ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು.

ಬಾಂಡ್ ಆಧಾರದಲ್ಲಿ ಮನೆ ನಿರ್ಮಿಸಿದವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.


ಬೆಳಗಾವಿಯ ಅಮನ್ ನಗರ, ಉಜ್ವಲ್ ನಗರ, ಸಮರ್ಥ ನಗರ, ವೈಭವ ನಗರದ ಜಟಪಟ್ ಕಾಲನಿಗಳಲ್ಲಿ ಬಡವರು ವಾಸಿಸುತ್ತಿದ್ದು, ಬಾಂಡ್ ಆಧಾರದ ಮೇಲೆ ಮನೆಗಳನ್ನು ನಿರ್ಮಿಸಿದ್ದಾರೆ. ಆದರೇ, ಕಳೆದ 1 ವರ್ಷದಿಂದ ವಿದ್ಯುತ್ ಮೀಟರ್ ನೀಡದ ಹಿನ್ನೆಲೆ ಜನರು ತೊಂದರೆಗಿಡಾಗಿದ್ದಾರೆ. ಕಳೆದ ಚಳಿಗಾಲದ ಅಧಿವೇಶನದ ವೇಳೆ ಸಚಿವರು ಶಾಸಕರಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಬಾಂಡ್ ಇದ್ದವರೂ ಬಿ. ಖಾತಾ ಪಡೆದವರಿಗೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಬೆಂಗಳೂರಿಗೆ ಒಂದು ನೀಡಿ ಬೆಳಗಾವಿಗೆ ಒಂದು ನೀತಿ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳು, ಬಡಜನರಿಗೆ ವಿದ್ಯುತ್ ಮೀಟರ್ ಒದಗಿಸಿಕೊಡಬೇಕು. ಮಳೆಗಾಲದ ಅಧಿವೇಶನದಲ್ಲಿ ಈ ಕುರಿತು ಸರ್ಕಾರ ಘೋಷಣೆ ಮಾಡಬೇಕೆಂದು ಅಂಜುಮನ್ ಸಂಸ್ಥೆಯ ಉತ್ತರ ಕರ್ನಾಟಕ ಪ್ರಮುಖರಾದ ಜಾವೀದ್ ನೇಗಿನಹಾಳ ಅವರು ಆಗ್ರಹಿಸಿದರು.

ಬಾಂಡ್’ಗಳ ಆಧಾರದ ಮೇಲೆ ಜಾಗೆಯನ್ನು ಖರೀದಿಸಿ ಬಡವರು ಮನೆಗಳನ್ನು ನಿರ್ಮಿಸಿದ್ದಾರೆ. ಆದರೇ, ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ತೀವ್ರ ತೊಂದರೆಯಾಗುತ್ತಿದ್ದು, ದೀಪಗಳನ್ನು ಉರಿಸಿ ಹಳೆಯ ಪದ್ಧತಿಗೆ ಮರಳುವಂತಾಗಿದೆ. ಅಲ್ಲದೇ, ವ್ಯವಸಾಯ, ವ್ಯವಹಾರಗಳಿಗೂ ತೊಂದರೆಯಾಗುತ್ತಿದ್ದು, ಇಲ್ಲಿ ನಿರ್ಮಿಸಲಾದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮನವಿ ಮಾಡಿದರು.

ಕಳೆದ 1 ವರ್ಷದಿಂದ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಕಳೆದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟಿಸಿ ಮನವಿ ನೀಡಿದರೂ ಸಹ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಸಿಎಂ ಅವರು ಈ ಅಂಜುಮನ್’ನ ಉತ್ತರ ಕರ್ನಾಟಕದ ಕಾರ್ಯಕಾರಿ ಕಾರ್ಯದರ್ಶಿ ಅಬ್ದುಲ್ ವಾಹೀದ್ ಅತ್ತಾರ ಅವರು ಆಗ್ರಹಿಸಿದರು.
