BELAGAVI

ಬೆಳಗಾವಿಯಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಗೆ ಭವ್ಯ ಜಲಾಭೀಷೇಕ: ಕನ್ನಡದ ಕಹಳೆ ಮೊಳಗಿಸಿದ ವಾಟಾಳ್ ನಾಗರಾಜ್!

Share

ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ನೂತನವಾಗಿ ಪ್ರತಿಷ್ಠಾಪಿಸಲಾದ ಕನ್ನಡದ ಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಲಾಭೀಷೇಕ ಮಾಡಲಾಯಿತು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ನೂತನವಾಗಿ ಪ್ರತಿಷ್ಠಾಪಿಸಲಾದ ಕನ್ನಡದ ಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಸೇರಿದಂತೆ ವಿವಿಧ ಗಣ್ಯರಿಂದ ವಿವಿಧೆಡೆಯಿಂದ ಆಗಮಿಸಿದ ಕುಂಭಗಳಿಂದ ಜಲಾಭೀಷೇಕವನ್ನು ನೆರವೇರಿಸಲಾಯಿತು.

ಬೆಳಗಾವಿ ಕರ್ನಾಟಕದ ಅಭಿಭಾಜ್ಯ ಅಂಗ ಎಂದು ಘೋಷಣೆ ಮಾಡಬೇಕೆಂದು ಹೋರಾಟ ಮಾಡಲಾಗುತ್ತಿದೆ. 2005 ರಲ್ಲಿ ವಿಜಯ್ ಮೋರೆ ಮಹಾಪೌರರಾಗಿದ್ದಾಗ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲಾಗಿದ್ದು, ಅದನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟಯೆನ್ನು ನಡೆಸುತ್ತಿವೆ. ಗಡಿ ವಿವಾದವು ಸುಪ್ರೀಂಕೋರ್ಟಿನಲ್ಲಿದ್ದು, ಅದು ಬೇಗನೆ ಬಗೆಹರಿಯಬೇಕು. ಮಹಾಜನ್ ವರದಿಯೇ ಗಡಿವಿವಾದಲ್ಲಿ ಅಂತಿಮ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಸ್ ಮಾಡಬೇಕು. ಅಲ್ಲಿಯ ವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!