ಸರ್ಕಾರಿ ನೌಕರಿ ಮಾಡಿ ಕೇವಲ ವೇತನ ಪಡೆಯುವುದು ಮುಖ್ಯವಲ್ಲ, ಅದರೊಟ್ಟಿಗೆ ನಾವು ಜನಸ್ನೇಹಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಹಂಭಾವ ಬಿಟ್ಟು ಜನಸೇವೆಯನ್ನು ಮಾಡಿದ ಅಧಿಕಾರಿ ಹೆಸ್ಕಾಂ ಎಇಇ ಅಶ್ವಿನ್ ಶಿಂಧೆ ಎಲ್ಲರಿಗೂ ಮಾದರಿ ಎಂದು ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು ಹೇಳಿದರು.


ಬೆಳಗಾವಿಯ ಕೆಪಿಟಿಸಿಎಲ್ ಸಭಾಗೃಹದಲ್ಲಿ ಇಂದು ನಡೆದ ಸಮಾರಂಭದಲ್ಲಿ ಹೆಸ್ಕಾಂನಲ್ಲಿ ಸುಮಾರು 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶ್ವೀನ್ ಶಿಂಧೆ ಅವರನ್ನು ಆತ್ಮೀಯವಾಗಿ ನಾಗರೀಕ ಸನ್ಮಾನದೊಂದಿಗೆ ಬೀಳ್ಕೋಡಲಾಯಿತು.


ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಜೀಗಳು, ಅಶ್ವಿನ್ ಶಿಂಧೆ ಅವರು ಧಾರ್ಮಿಕ ಪ್ರವೃತ್ತಿ, ಸಾತ್ವಿಕ, ಸರಳ ಸಜ್ಜನಿಕಯೆ ವ್ಯಕ್ತಿತ್ವ ಹೊಂದಿದವರು. ರಾತ್ರಿ ಸಮಯದಲ್ಲಿಯೂ ಕೂಡ ವಿದ್ಯುತ್ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಅವರು ಸ್ಪಂದಿಸಿದ್ದರು. ಹೆಸ್ಕಾಂನಲ್ಲಿ ಸುಮಾರು 38 ವರ್ಷಗಳ ವರೆಗೆ ಜನರ ಭಾವನೆಗಳನ್ನು ಅರಿತುಕೊಂಡು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇಂದು ಅವರು ನಿವೃತ್ತರಾಗುತ್ತಿದ್ದಾರೆಂಬುದು ಮನ್ಸಸ್ಸಿಗೆ ನೋವೆನುಸುತ್ತದೆ. ನೌಕರಿ ಮಾಡಿ ಸರ್ಕಾರದ ವೇತನ ಪಡೆಯುವುದು ಮುಖ್ಯವಲ್ಲ. ಅದರೊಟ್ಟಿಗೆ ನಾವು ಜನಸ್ನೇಹಿಯಾಗಿರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಧಿಕಾರವನ್ನು ಜನರು ಸೇವೆ ಮಾಡಲೂ ಕೊಟ್ಟಿರುತ್ತಾರೆ. ಅಲ್ಲಿ ಅಹಂಭಾವ ಇರಬಾರದು. ಸಮಾಜಕ್ಕೆ ಮಾದರಿಯಾದ ಮತ್ತು ಸದಾ ಜನರು ಸ್ಮರಿಸುವ ಪ್ರೀತಿ ವಿಶ್ವಾಸಕ್ಕೆ ಪಾತ್ರವಾದ ವ್ಯಕ್ತಿ ಎಂದರೇ ಅಶ್ವಿನ್ ಶಿಂಧೆ ಎಂದರು.

ಅಧ್ಯಕ್ಷತೆಯಲ್ಲಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾಪೌರ ಪ್ರೀತಿ ಕಾಮಕರ್, ಉಪಮಹಾಪೌರ ಹಣುಮಂತ ಕೊಂಗಾಲಿ ಉಪಸ್ಥಿತರಿದ್ಧರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ, ಎಂ.ಎಲ್., ನಿರ್ದೇಶಕರಾದ ಎಸ್. ಜಗದೀಶ್, ಅಧೀಕ್ಷಕ ಅಭಿಯಂತರರಾದ ಪ್ರವೀಣಕುಮಾರ್ ಚಿಕಡೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

