arrest

ಬೆಳಗಾವಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಖಾಕಿ ದಾಳಿ; ಇಬ್ಬರ ಬಂಧನ, ನಗದು ಜಪ್ತಿ!

Share

ಬೆಳಗಾವಿ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಆಪ್‌ಗಳ ಮೂಲಕ ಆನ್‌ಲೈನ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 24.05.2026 ರಂದು ಬೆಳಗಾವಿಯ ಖಡೇಬಜಾರ್ ಪೊಲೀಸ್ ಚೌಕಿ ಹತ್ತಿರ ಉಜ್ಜಲ ನಗರದ ಮೈತಾಬ ಅಬ್ದುಲಸಾಬ ಮುಲ್ಲಾ (40) ಎಂಬಾತ ಸಾರ್ವಜನಿಕರಿಂದ ಹಣ ಪಡೆದು ಮೊಬೈಲ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದಾಗ ಮಾರ್ಕೆಟ್ ಠಾಣೆಯ ಪಿಎಸ್‌ಐ ಶ್ರೀ ಹುಸೇನಸಾಬ ಕೇರೂರ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಈತನಿಂದ ರೂ. 4,000 ಮೌಲ್ಯದ ಮೊಬೈಲ್ ಹಾಗೂ ರೂ. 1,900 ನಗದು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆಯಲ್ಲಿ ರೋಹಿತ ಎಂಬ ಮತ್ತೊಬ್ಬ ಆರೋಪಿಯ ಭಾಗೀದಾರಿಕೆ ಪತ್ತೆಯಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ, ನ್ಯೂ ಸಿಟಿ ಬಸ್‌ಸ್ಟ್ಯಾಂಡ್ ಹತ್ತಿರ ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಮೇಲೆ ‘ಕ್ರಿಕೆಟ್ ಬೆಟ್-99’ ಆಪ್ ಬಳಸಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಉತ್ತರ ಪ್ರದೇಶ ಮೂಲದ, ಪ್ರಸ್ತುತ ರಾಮದೇವ ಗಲ್ಲಿ ನಿವಾಸಿ ಅಫ್ತಾಲ ಅಸಗರಅಲಿ (30) ಎಂಬಾತನನ್ನು ಪಿಎಸ್‌ಐ ಶ್ರೀ ಶಶಿಕುಮಾರ್ ಎಸ್. ಕುರಲಿ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಈತನಿಂದ ರೂ. 5,000 ಮೌಲ್ಯದ ಮೊಬೈಲ್ ಹಾಗೂ ರೂ. 4,700 ನಗದು ವಶಪಡಿಸಿಕೊಳ್ಳಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ತಂಡವನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!