BELAGAVI

ಹಿರಿಯ ಪತ್ರಕರ್ತ ಗೋಪಾಲ ಖಟಾವಕರ ಅವರಿಗೆ ‘ಮೌಲ್ಯ ಪತ್ರಿಕೋದ್ಯಮ ಪ್ರಶಸ್ತಿ’ ಗೌರವ

Share

ಬೆಳಗಾವಿಯ ಖ್ಯಾತ ಹಿರಿಯ ಪತ್ರಕರ್ತ ಮತ್ತು ಲೇಖಕರಾದ ಶ್ರೀ ಗೋಪಾಲ ಖಟಾವಕರ ಅವರಿಗೆ ಪ್ರತಿಷ್ಠಿತ ‘ಮೌಲ್ಯ ಪತ್ರಿಕೋದ್ಯಮ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ರಾಮದುರ್ಗದ ಮೌಲ್ಯ ಸಂಪದ ವಾರಪತ್ರಿಕೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಶಿರಸಂಗಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಿರಿಯ ಲೇಖಕ, ಪತ್ರಕರ್ತ ಗೋಪಾಲ ಖಟಾವಕರ ಅವರಿಗೆ ಶಾಲು ಹೊದಿಸಿ ‘ಮೌಲ್ಯ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಳೆದ 3 ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಇವರು ಈಗಾಗಲೇ ಗ.ಗೋ ರಾಜ್ಯಾಧ್ಯಕ್ಷ ಪ್ರಶಸ್ತಿ, ಸಮಾಜ ಸೇವಾ ರತ್ನ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಸಮಾಜ ಸ್ಪಂದನ, ಜನಸ್ಪಂದನ, ಪರಿವರ್ತನೆ, ದಿಕ್ಕೂಚಿ ಸೇರಿದಂತೆ ಇವರು ಬರೆದ ವೈಚಾರಿಕ ಕೃತಿಗಳು ಶಾಲಾ-ಕಾಲೇಜು ಗ್ರಂಥಾಲಯಗಳಿಗೂ ಆಯ್ಕೆಯಾಗಿವೆ. ಈ ಅದ್ಧೂರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಚಿಕ್ಕುಂಬಿಯ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳು, ಮುಳ್ಳೂರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಪತ್ರಿಕೆಯ ಸಂಪಾದಕ ಸೋಮಶೇಖರ ಸೊಗಲದ ಹಾಗೂ ಪ್ರಮುಖ ಕನ್ನಡ ಹೋರಾಟಗಾರರು, ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!