ಬೆಳಗಾವಿ ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದಂಡು ಮಂಡಳಿತ ನೂತನ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಸೂಚನೆ ನೀಡಿದರು.

ಸೋಮವಾರ ದಂಡುಮಂಡಳಿಯ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಸಾಕಷ್ಟು ಐತಿಹಾಸಕ ಸ್ಥಳಗಳಿವೆ. ಪ್ರವಾಸಿಗರು ರಜೆಯಲ್ಲಿ ವೀಕ್ಷಣೆಗೆ ಬಂದಾಗ ಪ್ಲಾಸ್ಟಿಕ್ ಬಳಕೆ ಮಾಡಿ ಅಲ್ಲಿಯೇ ಬಿಸಾಡುತ್ತಾರೆ. ದಂಡುಮಂಡಳಿಯಿಂದ ಬೆಳಗಾವಿಯ ಅಸದಖಾನ್ ದರ್ಗಾ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳದಲ್ಲಿ ಪ್ಲಾಸ್ಟಿಕ್ ಮುಕ್ತ ದಂಡುಮಂಡಳಿ ಎಂಬ ನಾಮಫಲಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ದಂಡುಮಂಡಳಿ ಸಿಇಓ ಮಂಚಲವಾರ ಹರಿವಿಜಯ ಮಾತನಾಡಿ, ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ. ಆದರೂ ಇನ್ನೊಂದು ಬಾರಿ ಎಲ್ಆ್ಯಂಡ್ ಟಿ ಕಂಪನಿಯ ಜೊತೆಗೆ ಸಭೆ ಆಯೋಜಿಸಲಾಗುವುದು ಎಂದರು.
ಬ್ರಿಗೇಡಿಯರ್ ಗಣೇಶ್ ಉಪಾಧ್ಯ ಮಾತನಾಡಿ, ಎಲ್ಆ್ಯಂಡ್ ಟಿ ಕಂಪನಿಯ ರಸ್ತೆ ಅಗೇದರೆ ಅವರೇ ದುರಸ್ತಿ ಮಾಡಬೇಕು. ಇವರು ಮಾಡಿರುವ ಕಾಮಗಾರಿಯಿಂದ ಅಪಘಾತಗಳು ಸಂಭವಿಸಿವೆ. ಈ ವಿಷಯ ಗಂಭೀರವಾಗಿ ಪರಿಗಣಿಸಿ ಎಲ್ಆ್ಯಂಡ್ ಟಿ ಕಂಪನಿ ಅಗೇದ ರಸ್ತೆ ದುರಸ್ತಿ ಮಾಡಬೇಕು ಎಂದರು. ದಂಡುಮಂಡಳಿಯ ವ್ಯಾಪ್ತಿಯಲ್ಲಿ ಘನತಾಜ್ಯ ವಿಲೇವಾರಿ ಸಮರ್ಪಕವಾಗಬೇಕು. ಸುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಿ ನಿರಂತರವಾಗಿ ಪರಿಶೀಲನೆ ಮಾಡಬೇಕು ಎಂದು ಬ್ರಿಗೇಡಿಯರ್ ತಿಳಿಸಿದರು.
ಇನ್ನು ಬ್ರಿಗೇಡಿಯರ್ ಗಣೇಶ್ ಉಪಾಧ್ಯ ಅವರನ್ನು ಬೆಳಗಾವಿ ದಂಡುಮಂಡಳಿಯ ನೂತನ ಬ್ರಿಗೇಡಿಯರ್ ಗಿರೀಶ್ ಉಪಾಧ್ಯೆಗೆ ಶಾಸಕ ಆಸೀಫ್ ಸೇಠ್ ಸೋಮವಾರ ಸ್ವಾಗತಿಸಿದರು. ದಂಡುಮಂಡಳಿಯ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು ನೂತನ ಬ್ರಿಗೇಡಿಯರ್ ಗಣೇಶ್ ಅವರಿಗೆ ಸಿಬ್ವಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್, ಬೆಳಗಾವಿಯ ದಂಡುಮಂಡಳಿಗೆ ನೂತನ ಬ್ರಿಗೇಡಿಯರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ದಂಡುಮಂಡಳಿಯ ಅಭಿವೃದ್ಧಿ ಪಥದತ್ತ ಸಾಗಲಿ ಎಂದರು.
