ಬೆಳಗಾವಿಯಲ್ಲಿ ಪಡಿತರ ವಿತರಣೆಯ ಸರ್ವರ್ ಸಮಸ್ಯೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಿಂಗಳ ಆರಂಭದಿಂದಲೇ ಸರ್ವರ್ ಕೈಕೊಟ್ಟಿರುವುದರಿಂದ ಬಡವರಿಗೆ ದವಸ ಧಾನ್ಯ ಸಿಗದೆ ಪರದಾಡುವಂತಾಗಿದ್ದು, ಇದಕ್ಕೆ ಬೇಸತ್ತ ಜಿಲ್ಲೆಯ ನ್ಯಾಯಬೆಲೆ ಅಂಗಡಿ ಮಾಲೀಕರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿ ಮಾಲೀಕರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಈ ತಿಂಗಳು ಆರಂಭದಿಂದಲೇ ನ್ಯಾಯಬೆಲೆ ಅಂಗಡಿಯ ಸರ್ವರ್ ಸಮಸ್ಯೆ ಅತ್ಯಂತ ಭೀಕರವಾಗಿದೆ. ನ್ಯಾಯ ಬೆಲೆ ಅಂಗಡಿ ಮುಖಾಂತರ ಬಡವರಿಗೆ ದವಸ ಧಾನ್ಯ ಸಿಗದಾಗಿದೆ. ಥಂಬ್ ಪಡೆದುಕೊಳ್ಳಲು ಅತ್ಯಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಬೆಳಿಗ್ಗೆಯಿಂದ ಸಂಜೆಯ ವರೆಗೆ ನ್ಯಾಯ ಬೆಲೆ ಅಂಗಡಿಯ ಎದುರು ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಶೇ. 40 ರಷ್ಟು ಅಕ್ಕಿಯನ್ನು ವಿತರಿಸಲಾಗಿದ್ದು, ಶೇ. 60 ರಷ್ಟು ಅಕ್ಕಿಯನ್ನು ವಿತರಿಸಬೇಕಿದೆ. ಆಹಾರ ಇಲಾಖೆಯೂ ಓರ್ವ ವ್ಯಕ್ತಿಯಿಂದ ಎರಡು ಬಾರಿ ಥಂಬ್ ಪಡೆಯುವ ವ್ಯವಸ್ಥೆಯೂ ಅನ್ಯಾಯಕಾರಕವಾಗಿದೆ. ಸರ್ವರ್ ಹಿನ್ನೆಲೆ ಒಂದೇ ಬಾರಿ ಥಂಬ್ ಬರುವುದು ದುಸ್ತರವಾಗಿದ್ದು, ಮುಂದಿನ ತಿಂಗಳಿನಿಂದ ಕೇವಲ ಒಂದೇ ಬಾರಿ ಥಂಬ್ ಪಡೆಯುವ ಅನುಮತಿ ನೀಡುವುದರೊಂದಿಗೆ ಸರ್ವರ್ ಸಮಸ್ಯೆಯನ್ನು ಪರಿಹರಿಸಬೇಕೆಂದು ರಾಜಶೇಖರ್ ತಳವಾರ ಅವರು ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳು ಸಕಾರಾತ್ಮಕ ಸ್ಪಂದನೆಯನ್ನು ನೀಡಿದರು. ಈ ಸಂದರ್ಭದಲ್ಲಿ ನ್ಯಾಯ ಬೆಲೆ ಅಂಗಡಿಯ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
