ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರೋ ಘಟನೆ ಮೂಡಲಗಿ ಪಟ್ಟಣದ ವಡ್ಡರ ಓಣಿಯಲ್ಲಿ ನಡೆದಿದೆ.
ಲಕ್ಷ್ಮಣ ಬಂಡಿವಡ್ಡರ (22) ಕೊಲೆಯಾದ ಯುವಕ. ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮಕ್ಕೆ ಕೆಲಸಕ್ಕೆ ಹೋಗಿದ್ದ ಲಕ್ಷ್ಮಣ ಮೇ 18ರಂದು ಸ್ವಗ್ರಹಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಇನ್ನೂ ಲಕ್ಷ್ಮಣನ ಕೊಲೆಯೂ ಹುಡುಗಿ ವಿಚಾರಕ್ಕೆ ನಡೆದಿದೆ ಎಂಬ ಶಂಕೆ ಕೂಡಾ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು, ಯುವಕನ ಕೊಲೆಯನ್ನು 4 ಜನ ಯುವಕರು ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಬಂಧನಕ್ಕೆ ಮೂಡಲಗಿ ಪೊಲೀಸ್ ಅಧಿಕಾರಿಗಳು ಜಾಲ ಬಿಸಿದ್ದಾರೆ.
ಘಟನೆ ಬಳಿಕ ಫೋನ್ ಕರೆ: ಆರೋಪಿಗಳು ಚೂರಿ ಇರಿದ ಪರಾರಿಯಾದ ಬಳಿಕ ರಕ್ತದ ಮಡುವಿನಲ್ಲಿ ಇದ್ದ ಲಕ್ಷ್ಮಣ ತನ್ನ ಸಂಬಂಧಿಕರ ಮನೆಗೆ ಕರೆ ಮಾಡಿ ತನಗೆ ಚಾಕು ಇರಿತ ಮಾಡಲಾಗಿದೆ ಎಂದು ಹೇಳಿದ್ದಾನೆ. ಅಷ್ಟರಲ್ಲಿ ಆತನ ಸಂಬಂಧಿಕರು ಹೋಗುವಷ್ಟರಲ್ಲಿ ಅತಿ ಹೆಚ್ಚು ರಕ್ತದ ನಡುವಿನಲ್ಲಿ ಬಿದ್ದಿರುವುದರಿಂದ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಆದರೂ ಲಕ್ಷ್ಮಣನ ಪ್ರಾಣಪಕ್ಷಿ ಹಾರಿಹೋಗಿದೆ.
ಅಪ್ಪಟ ಭಗತ್ ಸಿಂಗ್ ಅಭಿಮಾನಿ ಲಕ್ಷ್ಮಣ : ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅಭಿಮಾನಿಯಾಗಿದ ಲಕ್ಷ್ಮಣ ಕಳೆದ ಸುಮಾರು ದಿನಗಳ ಹಿಂದೆ ಭಗತ್ ಸಿಂಗ್ ಯುವಕರ ಸಂಘ ವನ್ನು ಕೂಡಾ ಕಟ್ಟಿಕೊಂಡು ಗೆಳೆಯರ ಬಳಗದಲ್ಲಿ ತನ್ನದೇ ಆದ ವರ್ಚಸ್ಸನ್ನು ತನ್ನ ಓಣಿಯಲ್ಲಿ ಉಳಿಸಿಕೊಂಡಿದ್ದ ಎನ್ನಲಾಗಿದೆ.

