Accident

ಕಂಟೇನರ್-ಗೂಡ್ಸ್ ಟ್ರಕ್ ಭೀಕರ ಡಿಕ್ಕಿ;ವಾಹನದಲ್ಲೇ ಉಳಿದ ಚಾಲಕನ ಅರ್ಧ ಕಾಲು

Share

ಅಥಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ

ಮುಖಾಮುಖಿ ಡಿಕ್ಕಿಗೆ ಗೂಡ್ಸ್ ಟ್ರಕ್ ಸಂಪೂರ್ಣ ನಜ್ಜುಗುಜ್ಜು

ವಾಹನದಲ್ಲೇ ಉಳಿಯಿತು ಅಪಘಾತಕ್ಕೀಡಾದ ಚಾಲಕನ ಅರ್ಧಕಾಲು

ಆಸ್ಪತ್ರೆಯಲ್ಲಿ ಗಾಯಾಳು ಚಾಲಕನ ಜೀವ-ಮರಣ ಹೋರಾಟ

ಅಥಣಿ: ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯ ಅಥಣಿ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೂಡ್ಸ್ ಟ್ರಕ್ ಚಾಲಕನ ಬಲಗಾಲು ತುಂಡಾಗಿ ವಾಹನದಲ್ಲೇ ಸಿಲುಕಿದ ಘಟನೆ ನಡೆದಿದೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಜೀವ-ಮರಣ ಹೋರಾಟ ನಡೆಸುತ್ತಿದ್ದಾನೆ.

ವಿಜಯಪುರ ಮೂಲದ ಸುನಿಲ್ ಬಿರಾದಾರ (26) ಗಾಯಗೊಂಡ ಚಾಲಕ ಎಂದು ತಿಳಿದು ಬಂದಿದೆ. ಅಥಣಿಯಿಂದ ವಿಜಯಪುರ ಕಡೆಗೆ ತೆರಳುತ್ತಿದ್ದ ಗೂಡ್ಸ್ ಟ್ರಕ್ ಹಾಗೂ ವಿಜಯಪುರದಿಂದ ಅಥಣಿ ಕಡೆಗೆ ಬುಲ್ಡೋಜರ್ ಸಾಗಿಸುತ್ತಿದ್ದ ಕಂಟೇನರ್ ನಡುವೆ ರಭಸವಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಗೂಡ್ಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನ ಬಲಗಾಲು ತುಂಡಾಗಿ ವಾಹನದಲ್ಲೇ ಉಳಿದಿರುವುದು ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ.

ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!